Wednesday, July 20, 2011

ವಸಂತ ಬರೆದನು ಒಲವಿನ ಓಲೆ



ಚಿತ್ರ: ಬೆಸುಗೆ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ವರ್ಷ: ೧೯೭೬

ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ
ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ

ಹೂಗಳು ದುಂಬಿಯ ಚುಂಬನದಿಂದ ಪುಳಕಿತವಾಗಿಹ ಕಾಲ
ಮಧುಮಯ ಯೌವನ ಮೈ ಮನ ತುಂಬಿ ಮೆರೆದಿಹ ವಸಂತ ಕಾಲ
ತೀರದ ಆಸೆಯ ಆರದ ಉರಿಯ ವಿರಹಿಗೆ ತಂದಿಹ ಕಾಲ
ವಿರಹಿಗೆ ತಂದಿಹ ಕಾಲ
ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ

ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ
ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ
ಬಳ್ಳಿಯು ಹೆಮ್ಮರ ಆಸರೆ ಕೋರಿ ತೋಳನು ಬಳಸುವ ಕಾಲ
ತೋಳನು ಬಳಸುವ ಕಾಲ

ಪ್ರೇಮ ಪ್ರೀತಿ ನನ್ನುಸಿರು



ಚಿತ್ರ: ಸಿಂಗಾಪುರದಲ್ಲಿ ರಾಜಾ ಕುಳ್ಳ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಜೆ. ಯೇಸುದಾಸ್
ವರ್ಷ: ೧೯೭೮

ವಾಟ್ ಈಸ್ ಲೈಫ್ ಲೈಫ್ ಈಸ್ ಎ ಸಾಂಗ್
ದೆನ್ ಸಿಂಗ್ ಇಟ್ ಐ ಸೇ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಅನ್ಯಾಯ ಕಂಡಾಗ ಸಿಡಿಗುಂಡು ಸಿಡಿದಂತೆ
ಅಪರಾಧಿ ಎಲ್ಲೆಂದು ಹುಡುಕಾಡಿ ಹುಲಿಯಂತೆ
ಹೋರಾಡುವಾ ಬಾ ಓ ಗೆಳೆಯ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು

ಹೂವಂತೆ ಮೃದುವಾಗಬಲ್ಲೆ ಮುಳ್ಳಂತೆ ಮೊನಚಾಗಬಲ್ಲೆ
ಹಣ್ಣಂತೆ ಸಿಹಿಯಾಗಬಲ್ಲೆ ವಿಷದಂತೆ ಕಹಿಯಾಗಬಲ್ಲೆ
ಬಾಳೋದು ಹೇಗೆಂದು ನಾ ಬಲ್ಲೆ ಆಳೋದು ಹೇಗೆಂದು ಬಲ್ಲೆ
ಪ್ರೀತಿ ಪ್ರೀತಿಗೆ ರೋಷ ರೋಷಕೆ ನಮ್ಮ ರೀತಿಯೆನ್ನುವಾ

ವಾಟ್ ಈಸ್ ಲೈಫ್ ಲೈಫ್ ಈಸ್ ಎ ಡ್ಯೂಟಿ
ದೆನ್ ಪರ್ಫಾರ್ಮ್ ಇಟ್ ಐ ಸೇ
ಬಾಳು ಎಂದೂ ಹೂವಲ್ಲಾ ಬಾಳು ಎಂದೂ ಮುಳ್ಳಲ್ಲಾ
ಕಾಣೋದು ನಿಜವಲ್ಲ ಮಾತೆಲ್ಲಾ ಮುತ್ತಲ್ಲ
ಕಾಲಕ್ಕೆ ತಕ್ಕಂತೆ ಜಗದಲ್ಲಿ ಜನರೆಲ್ಲ
ಬಾಳೆಂಬುವಾ ಈ ಹಾದಿಯಲಿ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು

ಸವಿಯಾದ ಮಾತಾಡಬಲ್ಲೆ ಕವಿಯಾಗಿ ನಾ ಹಾಡಬಲ್ಲೆ
ಸಂತೋಷ ನಾ ಹಂಚಬಲ್ಲೆ ನೋವೆಲ್ಲಾ ನಾ ನುಂಗಬಲ್ಲೆ
ತಂಗಾಳಿ ನಾನಾಗಿ ಬರಬಲ್ಲೆ ಬಿರುಗಾಳಿ ನಾನಾಗಬಲ್ಲೆ
ಎಲ್ಲೆ ನೀನಿರು ಹೇಗೆ ನೀನಿರು ಎಂದೂ ಸ್ನೇಹದಿಂದಿರು

ಸೋ ವಾಟ್ ಈಸ್ ಲೈಫ್ ಲೈಫ್ ಈಸ್ ಎ ಗೇಮ್
ಆಹಾ ದೆನ್ ಪ್ಲೇ ಇಟ್ ಐ ಸೇ
ಹಗಲು ಇರುಳು ಇರುವಂತೆ ಸೋಲು ಗೆಲುವು ಜೊತೆಯಂತೆ
ಉಲ್ಲಾಸ ಸಂತೋಷ ಎಂದೆಂದೂ ಇರದೆಂದು
ನೋವೊಂದೇ ಸುಖವೊಂದೇ ಬಾಳಲ್ಲಿ ಬರದೆಂದು
ಈ ಸತ್ಯವಾ ನಾ ಅರಿತಿರುವೆ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಎವೆರಿಬಡೀ…

Thursday, July 7, 2011

ಒಂದಿರುಳು ಕನಸಿನಲಿ

ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ
ಸಂಗೀತ: ಸಿ. ಅಶ್ವಥ್
ಗಾಯಕರು: ರತ್ನಮಾಲಾ ಪ್ರಕಾಶ್, ಸಿ ಅಶ್ವಥ್

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು
ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ
ಚೆಂದ ನಿನಗಾವುದೆಂದು.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ?
ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು
ವಿಸ್ತರಿಸಿ ಹೇಳಬೇಕೆ?
ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.
ತೌರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ;
ಮಲ್ಲಿಗೆಯ ಮೊಗ್ಗುಗಳು ಮುಳ್ಳು ಬೇಲಿಯ ವರಿಸಿ
ಬಳುಕುತಿರೆ ಕಂಪ ಸೂಸಿ;
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ;
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು
ನಿಮ್ಮೂರ ಸೇರಿದಾಗ,
ಊರ ಬೇಲಿಗೆ ಬಂದು ನೀವು ನಮ್ಮನು ಕಂಡು
ಕುಶಲವನು ಕೇಳಿದಾಗ
ತುಟಿಯಲೇನೋ ನಿಂದು ಕಣ್ಣಲೇನೋ ಬಂದು
ಕೆನ್ನೆ ಕೆಂಪಾದುದಾಗ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

ಅಕ್ಕಿ ಆರಿಸುವಾಗ

ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು |ಪ|
ತಗ್ಗಿರುವ ಕೊರಳಿನ ಸುತ್ತ ಕರಿಮಣೆ ಒಂದೆ
ಸಿಂಗಾರ ಕಾಣದ ಹೆರಳು


ಬೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲ್ಲಿ
ಹದಿನಾರು ವರುಶದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳು |೧|


ಕಲ್ಲ ಹರಳನ್ನು ಹುಡುಕಿ
ಎಲ್ಲಿಗೊ ಎಸೆವಾಗ ಝಲ್ಲೆನುವ ಬಳೆಯ ಸದ್ದು
ಅತ್ತ ಯಾರೊ ಹೋದ ಇತ್ತ ಯಾರೊ ಬಂದ
ಕಡೆಗೆಲ್ಲ ಕಣ್ಣು ಬಿದ್ದು
ಬಂಗಾರವಿಲ್ಲದ ಬೆರಳು |೨|


ಮನೆಗೆಲಸ ಬೆಟ್ಟದಷ್ಟಿರಲು
ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು
ಬೆಸರಿಯ ಕಿರಿ ಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು |೩|

ಒಂದು ಮಾತು... ನನಗೆ ಗೊತ್ತು



ಚಿತ್ರ : ಕೆರಳಿದ ಸಿಂಹ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಸತ್ಯಂ
ಗಾಯನ : ಡಾ|| ರಾಜ್ ಕುಮಾರ್, ಸುಲೋಚನ
ವರ್ಷ: ೧೯೮೨

ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಈ ದಿನ ಬೇರೆ ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ

ಸಂಜೆಯ ಕೆಂಪು ಗಾಳಿಯ ತಂಪು
ಹೊಸ ಹೊಸ ಬಯಕೆ ತಂದಾಗ
ತುಂಬದ ವಿರಹ ಬಂದರೆ ಸನಿಹ
ಸಾರ್ಥಕ ನಮ್ಮ ಅನುರಾಗ
ಮೋಹದ ಮಾತನಾಡಿ
ಕಣ್ಣಲೇ ಮೋಡಿ ಮಾಡಿ
ಈಗೇಕೆ ನನ್ನಲಿ ಆಸೆಯ ತರುವೆ

ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ

ತೋಳಲಿ ಹೀಗೆ ಬಳಸಿದೆ ಏಕೆ
ಎದೆ ಜಿಲ್ ಎಂದಿದೆ ನನಗೀಗ
ಮೈಯಲಿ ಮಿಂಚು ತುಂಬುವ ಸಂಚು
ಮಾಡುವೆ ಏಕೆ ನೀನೀಗ
ಯಾರೂ ಇಲ್ಲದಾಗ ಆಸೆಯು ಮೂಡಿದಾಗ
ಈ ಬಿಂಕ ಬಿಗುಮಾನ ನಿನಗೇತಕೆ

ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಈ ದಿನ ಬೇರೆ ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ