Wednesday, September 29, 2010

ನೀರಿನಲ್ಲಿ ಅಲೆಯ ಉಂಗುರ

ಚಿತ್ರ: ಬೇಡಿ ಬಂದವಳು
ಸಾಹಿತ್ಯ: ಆರ್.ಎನ್. ಜಯಗೋಪಲ್
ಸಂಗೀತ: ಆರ್. ಸುದರ್ಶನಂ
ಗಾಯಕರು: ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ
ವರ್ಷ: ೧೯೬೮

ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ

ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ

ಅಂದಿಗೆಯೂ ಕಾಲಿನುಂಗುರ ಅದರ ದನಿ ಎಷ್ಟು ಸುಂದರ
ತರುವು ಲತೆಯೂ ಸೇರಿದ ಕಥೆಯೂ
ತರುವು ಲತೆಯೂ ಸೇರಿದ ಕಥೆಯೂ
ತನುವ ಬಳಸಿ ತೋಳಿನುಂಗುರ
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ

ಮಣ್ಣಿನಲ್ಲಿ ಕಂಡ ಉಂಗುರ ಹೆಣ್ಣು ನಾಚಿ ಗೀರಿದುಂಗುರ
ಬೆರಳಿನಿಂದ ತೀಡಿದುಂಗುರ
ಬೆರಳಿನಿಂದ ತೀಡಿದುಂಗುರ
ಕಣ್ಣ ಸೆಳೆವ ಕುರುಳುಗುಂಗುರ
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ

ಆಗಿ ನಿನ್ನ ಕೈಯ ಸಂಚರ ಎನ್ನ ಹೃದಯವೊಂದು ಢಂಗುರ
ನಾನೂ ನುಡಿಯೆ ಕಿವಿಯಲಿಂಚರ
ನಾನೂ ನುಡಿಯೆ ಕಿವಿಯಲಿಂಚರ
ಹಣೆಯ ಮೇಲೆ ಬೆವರಿನುಂಗುರ...
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ

ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ

ಚಿತ್ರ: ಗಾಳಿ ಮಾತು
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಜಾನಕಿ
ವರ್ಷ: ೧೯೮೧
 
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ

ಅರಳಿರುವ ಹೂವಿನಲ್ಲೀ ನಿನ್ನ ನೋಟವಾ
ಹರಿಯುತಿಹ ನೀರಿನಲ್ಲೀ ನಿನ್ನ ಓಟವಾ
ಇಂಪಾದ ಗಾನದಲ್ಲೀ ನಿನ್ನ ಮೊಗದ ಭಾವವಾ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ ನಾಟ್ಯದಲ್ಲೀ ನಿನ್ನ ಚಂದವಾ
ತಂಪಾದ ಗಾಳಿಯಲ್ಲೀ ನೀನಾಡೋ ಆಟವಾ
ದಿನವೆಲ್ಲಾ ನಾ ಕಂಡೇ ನಾ ಕಂಡು ಬೆರೆಗಾದೆ...

ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ...

ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದಾ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲಾ ನಿನ್ನಲ್ಲೇ ಮನಸೆಲ್ಲಾ...

ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ...
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ

Monday, September 27, 2010

ನನ್ನ ಹಾಡು ನನ್ನದು ನನ್ನ ರಾಗ ನನ್ನದು

ಚಿತ್ರ : ಸುಪ್ರಭಾತ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
 
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ : ೧೯೮೮

ಹ ಹ ಹ ಹ ಹ ಹ ಹಾ... ಹ ಹ ಹ ಹ ಹ ಹ ಹಾ..
ಲ ಲ ಲ ಲ ಲ ಲ ಲಾ... ಲ ಲ ಲ ಲ ಲ ಲ ಲಾ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು
ಎಲ್ಲೆಲ್ಲಿಯೂ ಎಂದೆಂದಿಗೂ, ಎಲ್ಲೆಲ್ಲಿಯೂ ಎಂದೆಂದಿಗೂ,
ನನ್ನಂತೆ ನಾನು ಇರುವೆನು, ನುಡಿವೆನು, ನಡೆವೆನು, ದುಡಿವೆನು.. ಈ ಬಾಳಲಿ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು

ನೋಡು ನೀಲಿ ಬಾನಿಗೆ, ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಡಿದೆ. ಹಾಯಾಗಿ ಆನಂದದೇ...
ತಂಪು ಗಾಳಿ ಬೀಸಿದೆ, ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ. ಲತೆಯಲ್ಲಿ ಹೂ ನಗುತಿದೆ.
ಜಗದ ಸೊಬಗು ನನಗೆ ತಾನೇ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು

ನೂರು ಜನರು ಬಂದರು, ನೂರು ಜನರು ಹೋದರು
ನನಗೆ ನಾನೇ ಸಂಗಾತಿಯು, ನಾನೆಂದೂ ಸುಖಜೀವಿಯು
ನೂರು ಜನರು ಬಂದರು, ನೂರು ಜನರು ಹೋದರು
ನನಗೆ ನಾನೇ ಸಂಗಾತಿಯು, ನಾನೆಂದೂ ಸುಖಜೀವಿಯು
ಉರಿವ ಬಿಸಿಲೆ ಬಂದರೂ, ಗುಡುಗು ಮಳೆಯೇ ಸುರಿದರೂ
ನನಗೆ ಎಲ್ಲ ಸಂತೋಷವೇ, ದಿನಕೊಂದು ಹೊಸ ನೋಟವೇ
ಹಗಲು ಇರುಳು ಸೊಗಸೂ ತಾನೇ...

ಎಲ್ಲೆಲ್ಲಿಯೂ ಎಂದೆಂದಿಗೂ, ಎಲ್ಲೆಲ್ಲಿಯೂ ಎಂದೆಂದಿಗೂ,
ನನ್ನಂತೆ ನಾನು ಇರುವೆನು, ನುಡಿವೆನು, ನಡೆವೆನು, ದುಡಿವೆನು.. ಈ ಬಾಳಲಿ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು

Friday, September 24, 2010

ಸೂರ್ಯಂಗೂ ಚಂದ್ರಂಗೂ ಬಂದಾರೆ

ಚಿತ್ರ: ಶುಭಮಂಗಳ
ಸಾಹಿತ್ಯ: ಎಂ.ಎನ್. ವ್ಯಾಸರಾವ್
ಸಂಗೀತ: ವಿಜಯಭಾಸ್ಕರ್
ಗಾಯಕರು: ರವೀ (ಕೆ.ಎಸ್‌.ಎಲ್‌.ಸ್ವಾಮಿ)
ವರ್ಷ: ೧೯೭೫

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು,
ಅರಮನ್ಯಾಗೆ ಏನೈತೆ ಸೊಗಸು

ಮನೆತುಂಬ ಹರಿದೈತೆ ಕೆನೆಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು, ಬ್ಯಾಸರದಾ ಉಸಿರು
ಗುಡಿಯಾಗೆ ಬೆಳ್‍ಗೈತೆ ತುಪ್ಪಾದ ದೀಪ
ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ, ಸಿಡಿದೈತೆ ಕ್ವಾಪ

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು

ಬೆಳದಿಂಗಳು ಚೆಲ್ಲೈತೆ ಅಂಗಳದಾ ಹೊರಗೇ
ಕರಿಮೋಡ ಮುಸುಕೈತೆ ಮನಸಿನಾ ಒಳಗೇ
ಬಯಲಾಗೆ ತುಳುಕೈತೆ ಹರುಸದಾ ಒನಲು
ಪ್ರೀತಿಯಾ ತೇರಿಗೇ ಬಡಿದೈತೆ ಸಿಡಿಲು,ಬಡಿದೈತೆ ಸಿಡಿಲು

ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು

ಮುಂಬಾಗಿಲ ರಂಗೋಲಿ ಮನಗೈತೆ ಹಾಯಾಗೀ
ಕಿರುನಗೆಯ ಮುಖವೆಲ್ಲ ಮುದುಡೈತೆ ಸೊರಗೀ
ಆನಂದ ಸಂತೋಸ ಈ ಮನೆಗೆ ಬರಲೀ
ಬೇಡುವೆನು ಕೈಮುಗಿದು ಆ ನನ್ನ ಸಿವನಾ,ಆ ನನ್ನ ಸಿವನಾ

ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು

ಹಾಲಲ್ಲಾದರೂ ಹಾಕು ನೀರಲ್ಲಾದರೂ

ಚಿತ್ರ : ದೇವತಾ ಮನುಷ್ಯ
ಸಾಹಿತ್ಯ : ಚಿ.ಉದಯ್ ಶಂಕರ್
ಸಂಗೀತ : ಉಪೇಂದ್ರ ಕುಮಾರ್
ಗಾಯಕರು : ಡಾ|| ರಾಜ್ ಕುಮಾರ್ ಹಾಗೂ ಬಿ. ಆರ್. ಛಾಯಾ
ವರ್ಷ : ೧೯೮೮

ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.

ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು, ರಾಘವೇಂದ್ರ.
ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು, ರಾಘವೇಂದ್ರ.
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ, ಒಂದಾಗಿರುವೆ ರಾಘವೇಂದ್ರ.
ಬಿಸಿಲಲ್ಲೇ ಒಣಗಿಸು, ನೆರಳಲ್ಲೇ ಮಲಗಿಸು, ರಾಘವೇಂದ್ರ.
ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ, ನಗುನಗುತಾಲಿರುವೆ ರಾಘವೇಂದ್ರ.

ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.

ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು, ನೀನೇ ಹೇಳು, ರಾಘವೇಂದ್ರ.
ಎಲ್ಲಿದ್ದಾರೇನು ನಾ, ಹೇಗಿದ್ದರೇನು ನಾ, ರಾಘವೇಂದ್ರ.
ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ, ಬಾಳಿದರೆ ಸಾಕು ರಾಘವೇಂದ್ರ.