Friday, January 28, 2011

ಪ್ರೀತಿಸಿ ನೋಡು ಪ್ರೇಮಿಸಿ ನೋಡು



ಚಿತ್ರ: ಪ್ರೀತಿಸಿ ನೋಡು
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು
ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ಪ್ರೀತಿಸಿ ನೋಡು ಪ್ರೀತಿಸಿ ನೋಡು
ಪ್ರೀತಿಸಿ ನೋಡು ಪ್ರೀತಿಸಿ ನೋಡು

ಪ್ರೀತಿಯೇ ದೇವನು ನೀಡಿದ ಕೊಡುಗೆ ಪ್ರೀತಿಯೇ ಆಗಲಿ ಮನಸಿನ ಉಡುಗೆ
ಪ್ರೀತಿಯೇ ಒಂದು ಪಾವನ ಜ್ಯೋತಿ
ಪ್ರೀತಿಯೇ ಒಂದು ಪಾವನ ಜ್ಯೋತಿ ಪ್ರೀತಿಯ ಬಾಳಿಗೆ ಪ್ರೀತಿಯೇ ನೀತಿ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ತಾಯಿಯ ಮಡಿಲಲಿ ಪ್ರೀತಿಯ ಬೆಸುಗೆ ಹರೆಯದ ವಯಸಲಿ ಪ್ರೀತಿಯ ಒಸಗೆ
ಪ್ರೀತಿಯ ಭಾವದ ಆಳ ಅಪಾರ
ಪ್ರೀತಿಯ ಭಾವದ ಆಳ ಅಪಾರ ಪ್ರೀತಿಯೇ ಬಾಳಿಗೆ ಅಮೃತಧಾರ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ಪ್ರೀತಿಸಿ ನೋಡು ಪ್ರೀತಿಸಿ ನೋಡು
ಪ್ರೀತಿಸಿ ನೋಡು ಪ್ರೀತಿಸಿ ನೋಡು

ಪ್ರೀತಿಯೇ ಲೋಕಕೆ ಆಸೆಯ ಹೊನಲು ಪ್ರೀತಿಯು ಇದ್ದರೆ ದಿನ ಹೊಸ ಹಗಲು
ಮನಸಿನ ಭಾವಕೆ ಪ್ರೀತಿಯೇ ಚಿಲುಮೆ
ಮನಸಿನ ಭಾವಕೆ ಪ್ರೀತಿಯೇ ಚಿಲುಮೆ ಸನಿಹಕೆ ತರುವುದೆ ಪ್ರೀತಿಯ ಹಿರಿಮೆ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

Tuesday, January 25, 2011

ಅನುರಾಗ ಮೂಡಿದಾಗ



ಚಿತ್ರ : ಕುಂಕುಮ ತಂದ ಸೌಭಾಗ್ಯ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ
ವರ್ಷ: ೧೯೮೫

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

ನಗುತಿರು ನಗುತಿರು ಎಂದೂ ಹೀಗೆ ಚೆಲುವೆ
ನಗುತಿರು ನಗುತಿರು ಎಂದೂ ಹೀಗೆ ಚೆಲುವೆ
ಪ್ರಣಯ ಗೀತೆ ತಂದ ನಿನಗೆ ನಾನು ತಂದ ಪ್ರೀತಿಗೆ
ಕಂಡೆ ನೀನು ತಂದ ಕಾಣಿಕೆ
ಬದುಕೆಲ್ಲ ಹೀಗೆ ಸಂತೋಷದಿಂದ ಬಾಳೋ ಆಸೆ ತಂದೆ ನನಗೆ

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ

ಮಗುವಿನ ನಗುಮೊಗ ಹೀಗೇ ನೋಡುತಿರಲು
ಮಗುವಿನ ನಗುಮೊಗ ಹೀಗೇ ನೋಡುತಿರಲು
ನನ್ನನ್ನು ನಾನು ಮರೆವೆ ಈ ಲೋಕವನ್ನೇ ಮರೆವೆ ಆ ಕ್ಷಣ
ಪಾವನವಾಯ್ತು ನನ್ನ ಜೀವನ
ಪ್ರತಿ ವರುಷ ಹೀಗೆ ಹೊಸದೊಂದು ಮಗುವ ಕೊಡೋ ಆಸೆ ಬಂತು ನನಗೆ

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

Monday, January 24, 2011

ಚೆಲುವೆಯ ಅಂದದ ಮೊಗಕೆ



ಚಿತ್ರ: ದೇವರಗುಡಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೫

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖಸಂಸಾರಕೆ ಎಂದೂ ಸತಿಯೇ ಕಾರಣ

ಬಾನಿಗೆ ಎಂದೆಂದಿಗೂ ಆ ರವಿಯೇ ಭೂಷಣ
ಬಳುಕುವಾ ಲತೆಗೆ ಹೆಣ್ಣಿನಾ ಮುಡಿಗೆ ಹೂವೇ ಭೂಷಣ
ರಜನಿಗೆ ಎಂದೆಂದಿಗೂ ಆ ಶಶಿಯೇ ಭೂಷಣ
ಅರಳಿದಾ ಮನಕೆ ಹವಳದಾ ತುಟಿಗೆ ನಗುವೇ ಭೂಷಣ
ನೋವಿಗೆ...ನಲಿವಿಗೆ...
ನೋವಿಗೆ...ನಲಿವಿಗೆ....ಹೆಣ್ಣೇ ಕಾರಣ....

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖಸಂಸಾರಕೆ ಎಂದೂ ಸತಿಯೇ ಕಾರಣ

ಮದುವೆಯ ಅನುಬಂಧವು ಎಂದೂ ಅಳಿಯದು
ಕೋಪದಾ ಕಿಡಿಗೆ ರೋಷದಾ ಉರಿಗೆ ಒಲವು ಬಾಡದು
ದೇಹವು ದೂರಾದರೂ ಮನಸೂ ಮರೆಯದು
ಬೆರೆತಿಹಾ ಜೀವ ವಿರಹದಾ ನೋವ ಎಂದೂ ಸಹಿಸದು
ಒಲವಿನ... ಜೀವನ...
ಒಲವಿನ... ಜೀವನ...ಸುಖಕೆ ಸಾಧನ

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖಸಂಸಾರಕೆ ಎಂದೂ ಸತಿಯೇ ಕಾರಣ

Wednesday, January 19, 2011

ಒಲವಿನ ಗೆಳೆಯನೆ ನಿನಗೆ



ಚಿತ್ರ: ನಾನಿರುವುದೆ ನಿನಗಾಗಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ: ೧೯೭೯

ನಲ್ಲ ಎನ್ನಲೆ ನಿನ್ನ… ಇನಿಯ ಎಂದು ಕೂಗಲೆ ನಿನ್ನ…
ನನ್ನೆದೆಯಾಳದಲಿ… ನೆಲೆಸಿರುವ ದೇವನೆ ನಿನ್ನ…
ಏನೆಂದು ಕರೆಯಲಿ… ಏನೆಂದು ಬರೆಯಲಿ…
ಗೆಳೆಯ ಪ್ರಿಯ ಗೆಳೆಯ
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನನಗಾಗಿ ನೀನಿರುವೆ ನಿನಗಾಗಿ ನಾ ಬಾಳುವೆ
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ

ನಿನ್ನ ಮನಸು ಬಲ್ಲೆನು ನಾನು
ನಿನ್ನಾಸೆ ಬಲ್ಲೆನು ನಾನು
ಹೂವಂಥ  ಹೃದಯವು ನಿನ್ನದು ಅಂಥ
ಜೇನಂಥ ನುಡಿಗಳು ನಿನ್ನದು
ನಿನ್ನ ನೆರಳಿನಾಸರೆಯಲ್ಲಿ ಸಂತೋಷದರಮನೆಯಲ್ಲಿ
ಹಾಯಾಗಿ ಬಾಳುವ ಕನಸು ನೂರಾರು ಕಂಡಿತು ಮನಸು
ಏನೇನೊ ಕೇಳಿದೆನು ಏನೇನೊ ಬೇಡಿದೆನು
ಕೊನೆಗೇನೂ ಕಾಣೆನು
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ

ನೀ ನಡೆವ ಹಾದಿಯೆ ಬೇರೆ
ನನ್ನ ಬಾಳ ದಾರಿಯೆ ಬೇರೆ
ಒಂದಾಗಿ ಸೇರೆವು ನಾವು
ಗತಿ ಒಂದೇ ಸಂಕಟ ನೋವು
ನನ್ನ ಮನದ ಮಾತುಗಳನ್ನು ಕಣ್ಣೀರ ಹನಿಗಳು ಬರೆದು
ನಿನಗಾಗಿ ಕಳಿಸಿದೆ ಇಂದು ನನ್ನೆದೆಗೆ ವೇದನೆ ತಂದು
ನೀ ನನ್ನ ದೂರದಿರು ಏನನ್ನು ಹೇಳದಿರು ನಾ ದೂರವಾದರೂ
ಒಲವಿನ ಗೆಳೆಯನೆ ನೀನೇ ನನ್ನ ಜೀವ ನನ್ನ ದೈವ
ನಿನ್ನ ಸುಖವೇ ನನ್ನ ಸುಖವು ನಿನಗೆಂದೂ ಶುಭ ಕೋರುವೆ
ಒಲವಿನ ಗೆಳೆಯನೆ ನೀನೇ ನನ್ನ ಜೀವ ನನ್ನ ದೈವ
ನನ್ನ ಜೀವ ನನ್ನ ದೈವ

Thursday, January 6, 2011

ನೀರ ಬಿಟ್ಟು ನೆಲದ ಮೇಲೆ



ಚಿತ್ರ: ಹೊಂಬಿಸಿಲು
ಸಾಹಿತ್ಯ: ಗೀತಪ್ರಿಯ
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ
ಜೀವನ ಸಾಗದು ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ
ಜೀವನ ಸಾಗದು ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಆಗಿರೆ
ಹಿತವು ಎಲ್ಲಿ ನಾವು ಬೇರೆ ಆದರೆ
ಹಿತವು ಎಲ್ಲಿ ನಾವು ಬೇರೆ ಆದರೆ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ
ಜೀವನ ಸಾಗದು

Wednesday, January 5, 2011

ಬಂಗಾರದ ಬೊಂಬೆಯೇ

ಚಿತ್ರ: ಮೂಗನ ಸೇಡು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೦

ಬಂಗಾರದ ಬೊಂಬೆಯೇ ಮಾತನಾಡೇ
ಬಂಗಾರದ ಬೊಂಬೆಯೇ ಮಾತನಾಡೇ
ಸಿಂಗಾರಿಯ ಬಾಳು ಬೆಳದಿಂಗಳಾಯಿತು

ಬಂಗಾರದ ಕೋಗಿಲೆ ನನ್ನ ಕಂಡು
ಬಂಗಾರದ ಕೋಗಿಲೆ ನನ್ನ ಕಂಡು
ಸಂಗಾತಿಯೆಂದಾಗ ಭೂವಿ ಸ್ವರ್ಗವಾಯಿತು
ಬಂಗಾರದ ಕೋಗಿಲೆ...

ಕವಿಯಂತೆ ನೀನಂದ  ಸವಿಯಾದ ಮಾತಿಂದ
ಹೊಸದಾದ ಆನಂದ ನಾ ಕಂಡೆನು
ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
ನುಡಿಸಲು ನಾನಿಂದು ಕವಿಯಾದೆನು
ಬಂಗಾರದ ಬೊಂಬೆಯೇ

ಜೊತೆಯಾಗಿ ನಡೆದಾಗ ಹಿತವಾಗಿ ಸೆಳೆದಾಗ
ಅನುರಾಗ ಹೊಸ ರಾಗ ಕೇಳೆಂದಿತು
ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
ಕಾಣಲು ನಿನ್ನಲ್ಲಿ ಮನ ಸೋತಿತು

ಬಂಗಾರದ ಕೋಗಿಲೆ ನನ್ನ ಕಂಡು
ಸಂಗಾತಿಯೆಂದಾಗ ಭೂವಿ ಸ್ವರ್ಗವಾಯಿತು

Tuesday, January 4, 2011

ಹೂವೊಂದು ಬೇಕು ಬಳ್ಳಿಗೆ



ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ:  ೧೯೭೭

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ
ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ
ಕಂದನಾ ಸಂತೋಷವೇ ತಾಯಿಯ ಸೌಭಾಗ್ಯಾವು
ಬಾಳಿನ ಆನಂದವು
ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ

ಬಿಸಿಲಿಗೆ ನೆರಳಿನಂತೆ ಇರುಳಿಗೆ ಬೆಳಕಿನಂತೆ
ಬಾಳಿಗೆ ಕಂಗಳಂತೆ ಮಗುವಿನ ಪ್ರೀತಿಯಂತೆ
ಕಂದನ ತೊದಲು ನುಡಿ ಜೇನಿನ ಹನಿಗಳಂತೆ
ಕೋಪದಿ ಅಳುವಾಗ ಜೋಗುಳ ಹಾಡಿದಂತೆ
ಸರಸವೆ ದಿನಾ ಅನುದಿನ ಹೊಸತನ ಹೊಸತನ

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ

ಒಣಗಿದ ರಂಬೆಯಲಿ ಹಸುರೆಲೆ ಮೂಡುವುದೇ
ಸೊರಗಿದ ಹರೈದಯದಲಿ ಸಂತಸ ಕಾಣುವುದೇ
ಮೂಡಿದ ಬಯಕೆಗಳು ಮುಗಿಯಲು ಕನಸಿನೊಳು
ಆಸೆಯು ಚಿಗುರುವುದೇ ಹರುಷವು ಉಳಿಯುವುದೇ
ಬಳಲಿದೆ ಮನ ಅನುದಿನ ಅನುಕ್ಷಣಾ ಅನುಕ್ಷಣಾ

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ
ಕಂದನಾ ಸಂತೋಷವೇ ತಾಯಿಯ ಸೌಭಾಗ್ಯಾವು
ಬಾಳಿನ ಆನಂದವು

ಮಾಮರವೆಲ್ಲೋ ಕೋಗಿಲೆ ಎಲ್ಲೋ



ಚಿತ್ರ: ದೇವರಗುಡಿ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೫

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ

ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ ನೈದಿಲೆ ಎಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲೀ ಹೇಗೇ ಇರಲೀ
ಕಾಣುವ ಆಸೆ ಏತಕೋ ಏನೋ

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ

ಹುಣ್ಣಿಮೆಯಲ್ಲಿ ತಣ್ಣನೆ ಗಾಳಿ
ಬೀಸಲು ನಿನ್ನ ನೆನಪಾಗುವುದು
ದಿನ ರಾತ್ರಿಯಲಿ ಏಕಾಂತದಲೀ
ಏಕೋ ಏನೋ ನೋವಾಗುವುದು
ಬಯಕೆಯು ತುಂಬಿ ಆಸೆಯ ದುಂಬಿ
ಎದೆಯನು ಕೊರೆದೂ ಕಾಡುವುದೇನೋ

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ