Wednesday, March 9, 2011

ಭಾಗ್ಯಾದ ಲಕ್ಷ್ಮೀ ಬಾರಮ್ಮ



ಚಿತ್ರ: ಭಾಗ್ಯದ ಲಕ್ಷ್ಮೀ ಬಾರಮ್ಮ
ರಚನೆ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೬

ಭಾಗ್ಯಾದ ಲಕ್ಷ್ಮೀ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ಉಸಿರನ್ನಾಡಲು ಪ್ರಾಣವು ಬೇಕು ಪ್ರಾಣವು ನಿಲ್ಲಲು ಊಟವು ಬೇಕು
ಊಟವ ಮಾಡಲು ಹಣವಿರಬೇಕು ಎಲ್ಲಕು ಲಕ್ಷ್ಮಿಯ ದಯೆ ಇರಬೇಕು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಜೇಬಿನ ತುಂಬ ಇದ್ದರೆ ನೋಟು ಸುಲಭದಿ ಸಿಗುವುದು ಕಾಲೇಜು ಸೀಟು
ದೊರಕದ ವೋಟಿನ ಬೇಟೆಗೆ ಕೂಡ ಇರಲೇಬೇಕು ಬಗೆ ಬಗೆ ನೋಟು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಕಾಸು ಬಿಚ್ಚಿದರೆ ಶೀಘ್ರ ದರುಶನ ಕಾಸಿಲ್ಲದಿರೆ ಧರ್ಮ ದರುಶನ
ಈ ಕಲಿಯುಗದಲಿ ಎಲ್ಲೇ ಹೋಗಲಿ ದೇವರು ಕೂಡ ನೋಡನು ಬಡವನ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ದೊರಕದ ಲೈಸೆನ್ಸ್ ದೊರಕುವುದುಂಟು ದೊರಕದ ವಸ್ತುವು ದೊರಕುವುದುಂಟು
ಟೇಬಲ್ ಕೆಳಗಡೆ ನೋಟು ತಳ್ಳಿದರೆ ಎಲ್ಲ ಕೆಲಸಕು ಸ್ಯಾಂಕ್ಷನ್ ಉಂಟು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ವೈದ್ಯರ ಆಸೆ ಬಡವನಿಗೇಕೆ ರೋಗವು ಬಂದರೆ ಅಳುವುದು ಏಕೆ
ಧರ್ಮಾಸ್ಪತ್ರೆಗೆ ಹೋದರು ರೋಗಿಯು ಲಂಚ ಲಂಚ ಎಂದರೆ ಮಂಚ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಕೆಲಸ ದೊರಕಲು ಹಣ ಕೊಡಬೇಕು ತಾಳಿಯ ಕಟ್ಟಲು ಕೂಲಿಯು ಬೇಕು
ಸಾಧು ಸನ್ಯಾಸಿಗಳಾದರೆ ಏನು ಪಾದ ಪೂಜೆಗೂ ನೋಟಿರಬೇಕು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಗೌರವ ಧನವಿದು ಎಂದರೂ ಒಂದೇ ಮೆಚ್ಚಿಗೆಗಾಗಿ ಎಂದರೂ ಒಂದೇ
ವಿಶ್ವಾಸಕೆ ಕಿರುಗಾಣಿಕೆ ಎಂದರೂ ಎಲ್ಲಾ ಒಂದೇ ಲಂಚದ ಕಂತೆ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಝಣ ಝಣ ಎಂದು ಸದ್ದನು ಮಾಡು ಹೆಣವೂ ಬಾಯ್ ಬಾಯ್ ಬಿಡುವುದು ನೋಡು
ಹಣವಿದ್ದರೆ ನೀ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಇಲ್ಲದ ಬುಧ್ದಿಯ ಇದೆ ಎನ್ನುವರು ಇಲ್ಲದ ಅಂದವ ಇದೆ ಎನ್ನುವರು
ಒಲ್ಲದೆ ಹೋದರೂ ಓಲೈಸುವರು ಬಲ್ಲಿದನಾದರೆ ಪಾದ ಹಿಡಿವರು
ಭಾಗ್ಯಾದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮೀ ಬಾರಮ್ಮ

No comments: