Wednesday, November 10, 2010

ಹೊಸಬಾಳು ಸೊಗಸೆಂದುಕೊಂಡೆ

ಚಿತ್ರ : ಪಟ್ಟಣಕ್ಕೆ ಬಂದ ಪತ್ನಿಯರು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ.ರಂಗರಾವ್
ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ವರ್ಷ: ೧೯೮೦

ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ

ಏಕೆ ವಿಷಾದ ಬಿಡು ಶೋಕ ನನ್ನೇತಕೆ ನೋಯಿಸುವೆ
ಹೀಗೆತಕೆ ಗೋಳಾಡುವೆ
ಹೆಣ್ಣೇ ನೀ ಕೇಳು ಇದೇ ನಾಕ ಸಂತೋಷದೆ ನೀನಿರಲು
ನಿನ್ನಾಸೆಗೆ ಮಿತಿ ಬೇಡವೆ
ಹೇ.. ಹೇ.. ಅತಿ ಆಸೆ ಒಳ್ಳೆದಲ್ಲ

ಯಾವುದು ಅತಿ ಆಸೆ ? ಪಟ್ಟಣಕೆ ಹೋಗಬೇಕು ಅನ್ನೋದಾ?
ನೆಮ್ಮದಿಯಿಂದ ಇರಬೇಕು ಅನ್ನೋದಾ? ನಗುನಗುತಾ ಬಾಳಬೇಕು ಅನ್ನೋದಾ?

ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ

ಸಾಕು ನಿರಾಸೆ ಬಿಡು ಚಿಂತೆ ನನ್ನಂತೆ ನೀ ಬಾಳಿದರೆ
ಈ ಹಳ್ಳಿಯೆ ಸಾಕೆನ್ನುವೆ
ನಲ್ಲೆ ನೀನೆಂದು ನನ್ನ ಮನೆಗೆ ಆನಂದವ ತುಂಬಿದರೆ
ನೀನಿಲ್ಲಿಯೇ ಸುಖ ಕಾಣುವೆ
ಹೇ... ಹೇ... ಸುಖ ಸಂತೋಷ ಅಂಗಡೀಲಿ ಮಾರೋದಿಲ್ಲ

ನಂಗೊತ್ತಿದೆ ನಿಮ್ ಸುಖ ಸಂತೋಷ
ಕೊಟ್ಟಿಗೆ ಗುಡಿಸೋದರಲ್ಲಿದೆ ಸಗಣಿ ಎತ್ತೋದರಲ್ಲಿದೆ
ಬೆರಣಿ ತಟ್ಟೋದರಲ್ಲಿದೆ

ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ..ಕನಸಾಗಿ ನೊಂದೆ

No comments: