Tuesday, November 9, 2010

ಕಂಗಳು ವಂದನೆ ಹೇಳಿದೆ

ಚಿತ್ರ: ಮುಗಿಯದ ಕಥೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೬

ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ
ಜೀವ ಜೀವ ಸೇರಲು ಮಾತು ಏತಕೆ
ಜೀವ ಜೀವ ಸೇರಲು ಮಾತು ಏತಕೆ ಒಲವಿನ ಕಾವ್ಯಕೆ ಇಂದೇ ಪೀಠಿಕೆ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ

ಮುಡಿಯ ಜಾರಿದ ಹೂವಿದು ಮುಗಿಯದ ಕಥೆ ನನ್ನದು
ಈ ಹೂವನು ಮಣ್ಣಿಂದಲೇ ಕಾಪಾಡಿದ ಕೈಗಳಿವು
ಗಂಗೆಗೆ ಕೊಳೆ ಸೋಂಕದು ಪಾಪದ ಫಲ ಸಲ್ಲದು
ನಿನ್ನನು ಪಡೆದಂಥಹ ಈ ಭಾಗ್ಯವು ನನ್ನದು
ಪೂರ್ವದ ಪುಣ್ಯವೋ ಜನ್ಮದ ಬಂಧವೋ
ನಾನು ನೀನು ನೀನು ನಾನು ಒಂದೇ ಎಂದೆಂದಿಗೂ

ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ

ಬಾಳಿನ ಗುಡಿ ಬೆಳಗಲಿ ಹರುಷದ ಹೊಳೆ ಹರಿಯಲಿ
ಪ್ರೇಮದ ಈ ನೌಕೆಯು ಸುಖ ತೀರವ ಸೇರಲಿ
ಹೇ ಹೇ ಅಹಾಹ ಅಹಾಹ ಅಹಾಹ ಅಹಾಹ
ಆಹಾ ಅಹಾಹ ಅಹಾಹ ಅಹಾಹ ಅಹಾಹ

ಬಯಕೆಯ ಕುಡಿ ಚಿಗುರಲಿ ಕನಸಿದು ಕೈಗೂಡಲಿ
ಎಂದಿಗೂ ಪತಿ ಸೇವೆಯ ಸೌಭಾಗ್ಯವು ಎನಗಿರಲಿ
ಸ್ವರವು ನೀ ಶೃತಿಯು ನಾ ದೊರೆಯು ನೀ ದಾಸಿ ನಾ
ನಾನು ನೀನು ನೀನು ನಾನು ಒಂದೇ ಎಂದೆಂದಿಗೂ

ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ

No comments: