Friday, November 12, 2010

ಮರಿಯಾ ಮೈ ಡಾರ್ಲಿಂಗ್



ಚಿತ್ರ: ಮರಿಯಾ ಮೈ ಡಾರ್ಲಿಂಗ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಶಂಕರ್-ಗಣೇಶ್
ಗಾಯಕರು :ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦

ಮರಿಯಾ ಮೈ ಡಾರ್ಲಿಂಗ್ ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ  ಮನಸು
ಮರಿಯಾ ಮೈ ಡಾರ್ಲಿಂಗ್ ಮರಿಯಾ ಮೈ ಡಾರ್ಲಿಂಗ್

ಸುಮವು ಮುಳ್ಳಾದ ಹಾಗೆ ನೆರಳು ಬಿಸಿಯಾದ ಹಾಗೆ
ಹಗಲು ಇರುಳಾದ ಹಾಗೆ ಸಿಹಿಯು ಕಹಿಯಾದ ಹಾಗೆ
ಸುಮವು ಮುಳ್ಳಾದ ಹಾಗೆ ನೆರಳು ಬಿಸಿಯಾದ ಹಾಗೆ
ಹಗಲು ಇರುಳಾದ ಹಾಗೆ ಸಿಹಿಯು ಕಹಿಯಾದ ಹಾಗೆ
ನೀನು ಕ್ಷಣಕೊಂದು ದಿನಕೊಂದು ರೀತಿ
ನಿನ್ನ ಕಂಡಾಗ ಅದರಿಂದ ಭೀತಿ

ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ  ಮನಸು
ಮರಿಯಾ ಮೈ ಡಾರ್ಲಿಂಗ್

ಕಾಣದ ದೇವ ಬೊಂಬೆಯ ಹಾಗೆ ಆಡಿಸಿ ನಿನ್ನ ನೋಡುವ ಹೀಗೆ
ಆತನ ಮೀರಿ ಹೋಗುವ ದಾರಿ ಎಲ್ಲೂ ಇಲ್ಲ ಮರಿಯಾ
ಕಾಣದ ದೇವ ಬೊಂಬೆಯ ಹಾಗೆ ಆಡಿಸಿ ನಿನ್ನ ನೋಡುವ ಹೀಗೆ
ಆತನ ಮೀರಿ ಹೋಗುವ ದಾರಿ ಎಲ್ಲೂ ಇಲ್ಲ ಮರಿಯಾ
ನಿನ್ನ ಓಡಾಟ ಅವನಾಸೆಯಂತೆ ನಿನ್ನ ಮನಸೆಂದೂ ಬಾನಡಿಯಂತೆ

ಮರಿಯಾ ಮೈ ಡಾರ್ಲಿಂಗ್

ಹೆದರಿ ನೀ ಓಡಬೇಡ ಜನಕೆ ನೀ ಸೋಲಬೇಡ
ನಿಲ್ಲು ನೀ ಧೈರ್ಯದಿಂದ ಗೆಲ್ಲುವ ಸ್ಥೈರ್ಯದಿಂದ
ಕೇಳು ಹೊಸದೆಂದು ತಾನಾಗಿ ಬರದು
ಕ್ರಾಂತಿಯಾದಂತೆ ಹೊಸ ಬಾಳು ನಿನದು

ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ  ಮನಸು
ಮರಿಯಾ ಮೈ ಡಾರ್ಲಿಂಗ್

ಮೋಹದ ರಾಗ ಮೂಡಿದ ವೇಳೆ ಪ್ರೇಮದ ಗೀತೆ ಹಾಡಿದ ವೇಳೆ
ಜೋಗುಳ ಹೇಳೋ ತಾಯಿಯೇ ಆದೇ ನನ್ನ ಮುದ್ದು ಮರಿಯಾ
ಇಂದು ನಿಜವಾದ ಹೆಣ್ಣಾದ ನಿನ್ನ ಕಂಡು ಕನಸೆಲ್ಲಾ ನಿಜವಾಯ್ತು ಚಿನ್ನ

ಮರಿಯಾ ಮೈ ಡಾರ್ಲಿಂಗ್...... ಮರಿಯಾ ಮೈ ಡಾರ್ಲಿಂಗ್....

No comments: