Thursday, February 3, 2011

ಆಕಾಶ ದೀಪವು ನೀನು



ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೭

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ
ಆನಂದ ತುಂಬಲು ನೀನು ನಾ ನಲಿವೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಹೃದಯವು ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿ ಆದರೆ ನೀನು ನಾ ಉಳಿವೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಹೂವಾದ ಆಸೆಯೆಲ್ಲ ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲ ಸುಖ ಶಾಂತಿ ಇನ್ನಿಲ್ಲ
ನೆಮ್ಮದಿಯ ಕಾಣೆನು ನಾ ಸೋತೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

No comments: