Thursday, February 3, 2011

ಮೊದಲನೆ ದಿನವೇ ಒಲಿದೆ

ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೭

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ
ಮೊದಲನೆ ದಿನವೇ ಸೋತೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ
ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ
ಬಾಳ ಬಯಕೆಯೇ ನೀನಾದೆ ಬಾಳಿಗಾನಂದ ನೀ ತಂದೆ

ಪ್ರೇಮದ ಕಡಲಲಿ ಮುತ್ತಾದೆ ಪ್ರೇಮದ ಬದುಕಿಗೆ ಕಣ್ಣಾದೆ
ಪ್ರೇಮ ಪಲ್ಲವಿ ನೀನಾದೆ ಪ್ರೇಮದಾನಂದ ನೀ ತಂದೆ
ಪ್ರೇಮದಾನಂದ ನೀ ತಂದೆ

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾದೆ
ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾದೆ
ಪ್ರಾಣ ಪದಕವೇ ನೀನಾದೆ ನಾನು ನಿನ್ನಲ್ಲಿ ಒಂದಾದೆ

ಆಡುವ ಮಾತಿಗೆ ದನಿಯಾದೆ ಹಾಡುವ ಗೀತೆಗೆ ಶ್ರುತಿಯಾದೆ
ಜೀವ ಜೀವವೇ ನೀನಾದೆ ನಿನ್ನ ಮನದಲ್ಲಿ ನಾನಾದೆ
ನಿನ್ನ ಮನದಲ್ಲಿ ನಾನಾದೆ

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ
ಮೊದಲನೆ ದಿನವೇ ಸೋತೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

No comments: