Friday, February 4, 2011

ಹೇ.... ಕವಿತೆ ನೀನು ರಾಗ ನಾನು



ಚಿತ್ರ: ಪ್ರಿಯ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಇಳಯರಾಜ
ಗಾಯಕರು : ಕೆ. ಜೆ. ಯೇಸುದಾಸ್, ಎಸ್.ಜಾನಕಿ
ವರ್ಷ: ೧೯೭೯

ಹೇ.... ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
ಹೇ...ಕವಿತೆ ನೀನು ರಾಗ ನಾನು..

ನಿನ್ನ ರೂಪ ಕಂಡು ತಂಗಾಳಿ ಬಂದಿದೆ
ನಿನ್ನ ರೂಪ ಕಂಡು ತಂಗಾಳಿ ಬಂದಿದೆ
ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ಹೋಯ್..ಹೋಯ್.. ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ತನ್ನಾಸೆ ಇನ್ನೂ ತೀರದಾಗಿ ಬೀಸಿ ಬೀಸಿ ಬಂದು ಹೋಗಿ

ಹೇ.... ಕವಿತೆ ನೀನು ರಾಗ ನಾನು

ನಿನ್ನ ಮಾತು ಕೇಳಿ ಆ ಗಿಳಿಯೇ ನಾಚಿದೆ
ನಿನ್ನ ಮಾತು ಕೇಳಿ ಆ ಗಿಳಿಯೇ ನಾಚಿದೆ
ಮುದ್ದು ಮಾತ ಮರೆತು ಕಲ್ಲಾಗಿ ಹೋಗಿದೆ
ಹೋಯ್ ಹೋಯ್.. ಮುದ್ದು ಮಾತ ಮರೆತು ಕಲ್ಲಾಗಿಹೋಗಿದೆ
ನಿನ್ನಿಂದ ಪ್ರೀತಿ ಮಾತು ಇನ್ನು ಕೇಳಿ ಕೇಳಿ ಕಲಿವಾ ಆಸೆ

ಹೇ.... ಕವಿತೆ ನೀನು ರಾಗ ನಾನು

ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ಹೋಯ್ ಹೋಯ್ .. ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ನಿನ್ನಿಂದ ನನ್ನ ಯಾರೂ ಇನ್ನು ಎಂದೂ ದೂರ ಮಾಡಲಾರದೆಂದೂ

ಹೇ....ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
ಹೇ....ಕವಿತೆ ನೀನು ರಾಗ ನಾನು

1 comment:

Unknown said...

ನನ್ನ ಮೆಚ್ಚಿನ ಗೀತೆಗಳಲ್ಲಿ ಈ ಹಾಡು ಸಹ ಒಂದು .....