Thursday, October 7, 2010

ತೆರೆದಿದೆ ಮನೆ ಓ ಬಾ ಅತಿಥಿ



ಚಿತ್ರ: ಹೊಸಬೆಳಕು 
ಸಾಹಿತ್ಯ: ಕುವೆಂಪು
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ , ವಾಣಿ ಜಯರಾಂ
ವರ್ಷ: ೧೯೮೨ 

ಆ......   ತಾ... ನ.. ನಾ...
ತೆರೆದಿದೆ ಮನೆ ಓ ಬಾ ಅತಿಥಿ
ಆ......
ತೆರೆದಿದೆ ಮನೆ ಓ ಬಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ

1 comment:

Unknown said...

ಇಲ್ಲಿನ ಬಹಳಷ್ಟು ಹಾಡುಗಳು ಸದಾ ಮನದಲ್ಲಿ ಗುನುಗುತಿರುವ ಜನಪ್ರಿಯ ಗೀತೆಗಳೇ ಆಗಿವೆ. ಅದನ್ನೆಲ್ಲಾ ಒಟ್ಟುಗೂಡಿಸಿ ಸಿಗುವಂತೆ ಮಾಡಿದ ಮಿತ್ರರಿಗೆ ಅಭಿನಂದನೆಗಳು.:)