Saturday, October 9, 2010

ಬಾನು ಭೂಮಿಯ ಮಿಲನವ ಬಯಸುತ



ಚಿತ್ರ: ಮಾತು ತಪ್ಪದ ಮಗ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಇಳಯರಾಜ
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ವರ್ಷ: ೧೯೭೮  

ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ
ಬಾನು ಭೂಮಿಯ ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೆ ಹೂ ಚಿಂತೆ ರವಿಗೆಲ್ಲಿದೆ
ಭ್ರಮೆ ತುಂಬಿದೆ ಸಂಗಮದೆ

ಬಾಳೆಂಬ ಬನದೆ ಒಲವೆಂಬ ಹೂವ ಸೌಗಂಧ ನೀ ತಂದೆ
ಬಾಗಿದ ಲತೆಗೆ ಆಸರೆ ತಂದು ಮನದಲ್ಲಿ ನೀ ನಿಂದೆ
ಮೌನದ ಮಾತಲಿ ತುಂಬಿದೆ ಅರ್ಥ ತಂದೆ ನಾನಾಗ ಮೂಡಿತು ಅನುರಾಗ
ಬಾನು ಭುಮಿಯ ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೆ ಹೂ ಚಿಂತೆ ರವಿಗೆಲ್ಲಿದೆ

ಅಂಜಿಕೆ ಶಂಕೆ ತುಂಬಿದೆ ಮನದೆ ಮುಂದೇನು ಎನ್ನುತಲಿ
ಎಂದಿಗು ನಿನ್ನ ಕೈಬಿಡೆ ಚಿನ್ನ ನೋವೆನೆ ಬಂದಿರಲಿ
ಭರವಸೆ ತಂದ ಹರುಶದೊಳಿಂದ ಏನೊ ಆವೇಗ ಸೋತೆ ನಾನೀಗ

ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ

No comments: