Saturday, October 9, 2010

ನಿನ್ನ ನೀನು ಮರೆತರೇನು ಸುಖವಿದೆ



ಚಿತ್ರ: ದೇವರ ಕಣ್ಣು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೫

ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ

ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ

ಹಾಡುವುದನು ಕೋಗಿಲೆಯು...
ಹಾಡುವುದನು ಕೋಗಿಲೆಯು ಮರೆಯುವುದೇ, ಹಾರುವುದನು ಬಾನಾಡಿ ತೊರೆಯೆವುದೆ
ಮೀನು ಈಜದಿರುವುದೆ, ದು೦ಬಿ ಹೂವ ಮರೆವುದೆ
ಮೀನು ಈಜದಿರುವುದೆ, ದು೦ಬಿ ಹೂವ ಮರೆವುದೆ
ಮುಗಿಲ ಕ೦ಡ ನವಿಲು ನಲಿಯದೆ

ನಿನ್ನ ನೀನು ಮರೆತರೇನು ಸುಖವಿದೆ

ಗಾಳಿ ತನ್ನ ಚಲನೆಯನ್ನು ಮರೆಯುವುದೆ, ಬೆಳ್ಳಿ ಮೋಡ ತೇಲದೆ ನಿಲ್ಲುವುದೆ
ತಾರೆ ಮಿನುಗದಿರುವುದೆ, ಮಿ೦ಚು ಹೊಡೆಯದಿರುವುದೆ
ತಾರೆ ಮಿನುಗದಿರುವುದೆ, ಮಿ೦ಚು ಹೊಡೆಯದಿರುವುದೆ
ನದಿಯು ಕಡಲ ಸ್ನೇಹ ಮರೆವುದೆ,

ಸಗಮಪ, ಗಮಪನಿ, ಪನಿಸ, ಪನಿರಿ, ಗಾ ನಿ ಸಾ ನಿ ಪಾ ಮಾ ಗಾ ಮ ರಿ ,
ಗಾ ನಿ ಸಾ ನಿ ಪಾ ಮ ಗಾ ಮ ಪಾ, ಗಾ ನಿ ಸಾ ನಿ ಪಾ ಮಾ ಗಾ ಮ

ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ

No comments: