Saturday, October 9, 2010

ಬಯಸದೆ ಬಳಿ ಬಂದೆ

ಚಿತ್ರ: ಗಾಳಿಮಾತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೧

ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ

ಉರಿ ಬಿಸಿಲು ತಂಪಾಯ್ತು ನಿನ್ನ ನಾ ನೊಡಲು
ಮೈ ಏಕೊ ಬಿಸಿ ಆಯ್ತು ನೀನು ಬಳಿ ನಿಂತು ನಗಲು
ನೀ ನಡೆವ ಹಾದಿಯಲಿ ಕಲ್ಲು ಮೃದುವಾಯಿತು
ಮುಳ್ಳೆಲ್ಲ ಹೂವಾಗಿ ಭೂಮಿಯೇ ಸ್ವರ್ಗವಾಯ್ತು
ನಿಂತಲ್ಲೆ ನೀರಾಗಿ ನಾ ಕರಗಿಹೋದೆ

ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ

ಸೊಗಸೆಂಬ ನುಡಿಗಿಂತ ಸೊಗಸು ಈ ರೂಪವು
ಹಿತವೆಂಬ ನುಡಿಗಿಂತ ಹಿತವು ಈ ನಿನ್ನ ಒಲವು

ನಿನ್ನಿಂದ ಆನಂದ ಇಂದು ನಾ ಕಂಡೆನು
ಈ ನಿನ್ನ ಸ್ನೇಹವನು ಇನ್ನು ಎಂದೆಂದು ಬಿಡೆನು
ಸವಿಯಾದ ಮಾತಿಂದ ಹೊಸ ಬಾಳು ತಂದೆ

ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ

2 comments:

Anonymous said...

what a song, what a lyrics.... once upon a time our kannada film songs were in the peak stage but nowadays, v can hear most worst songs in kannada............... its our salute to those people who made kannada a rich language......... in those days only

Unknown said...

Yes old songs are golden songs