Showing posts with label ಅವಳ ಹೆಜ್ಜೆ. Show all posts
Showing posts with label ಅವಳ ಹೆಜ್ಜೆ. Show all posts

Tuesday, November 9, 2010

ದೇವರ ಆಟ ಬಲ್ಲವರಾರು



ಚಿತ್ರ: ಅವಳ ಹೆಜ್ಜೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು : ಎಸ್. ಜಾನಕಿ
ವರ್ಷ: ೧೯೮೧

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು....

ಹೊಸ ಹೊಸ ರಾಗ ಅನುದಿನ ಮೂಡಿ ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆಯೊಮ್ಮೆ ನೋವಲಿ ಹೃದಯ ಹಿಂಡುವುದೊಮ್ಮೆ
ಬಾಳಿನ ಈ ಹಾಡಿನ ರೀತಿ ..
ಬಾಳಿನ ಈ ಹಾಡಿನ ರೀತಿ  ಯಾರು ಇಂದು ಬಲ್ಲವರು

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು...

ಕಾನನ ಬರಲಿ ಕೊರಕಲೆ ಇರಲಿ ಓಡುವ ನದಿಯು ಸಾಗುವ ಹಾಗೆ
ಹೂಬನವಿರಲಿ ಮರುಭೂಮಿ ಬರಲಿ ನಿಲ್ಲದೆ ಗಾಳಿ ಬೀಸುವ ಹಾಗೆ
ನಿಲ್ಲದ ಈ ಪಯಣದ ಗುರಿಯ..
ನಿಲ್ಲದ ಈ ಪಯಣದ ಗುರಿಯ ಯಾರು ಇಂದು ಕಂಡವರು

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು