Showing posts with label ಭೂತಯ್ಯನ ಮಗ ಅಯ್ಯು. Show all posts
Showing posts with label ಭೂತಯ್ಯನ ಮಗ ಅಯ್ಯು. Show all posts

Wednesday, March 9, 2011

ಮಲೆನಾಡ ಹೆಣ್ಣ ಮೈ ಬಣ್ಣ



ಚಿತ್ರ: ಭೂತಯ್ಯನ ಮಗ ಅಯ್ಯು
ಸಾಹಿತ್ಯ : ಆರ್. ಎನ್. ಜಯಗೋಪಾಲ್
ಸಂಗೀತ : ಜಿ. ಕೆ. ವೆಂಕಟೇಶ್
ಗಾಯಕರು : ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ
ವರ್ಷ: ೧೯೭೪

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ
ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

ಬಯಲು ಸೀಮೆಯ ಗಂಡು ಬಲುಗುಂಡು
ಜಗಮೊಂಡು ದುಂಡು ಹೂ ಚೆಂಡು
ನನ್ನ ಸರದಾಗೆ ರಸಗುಂಡು ನನ್ನ ಸರದಾಗೆ ರಸಗುಂಡು

ಮಾತು ನಿಂದು ಹುರಿದಾ ಅರಳು ಸಿಡಿದಂಗೆ
ಕಣ್ಣುಗಳು ಮಿಂಚಂಗೆ ನಿನ್ನ ನಗೆಯಲ್ಲೆ ಸೆಳೆದ್ಯಲ್ಲೆ
ಮನದಾಗೆ ನಿಂತ್ಯಲ್ಲೆ ನನ್ನ ಮನದಾಗೆ ನಿಂತ್ಯಲ್ಲೆ

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

ಕಾಡಬೇಡಿ ನೋಡಿಯಾರು ನನ್ನೋರು
ನನ್ನ ಹಿರಿಯೋರು ಬಿಡಿ ನನ್ನ ಕೈಯ್ಯ ದಮ್ಮಯ್ಯ
ತುಂಟಾಟ ಸಾಕಯ್ಯ ಈ ತುಂಟಾಟ ಸಾಕಯ್ಯ

ದೂರದಿಂದ ಬಂದೆ ನಿನ್ನ ಹಂಬಲಿಸಿ
ಗೆಳೆತನ ನಾ ಬಯಸಿ

ಆದ ನಾ ಬಲ್ಲೇ ನಾ ಬಲ್ಲೆ ನಾಚಿ ಮೊಗ್ಗಾದೆ ನಾನಿಲ್ಲೆ
ನಾಚಿ ಮೊಗ್ಗಾದೆ ನಾನಿಲ್ಲೆ

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ