Showing posts with label ಮರೆಯದ ಹಾಡು. Show all posts
Showing posts with label ಮರೆಯದ ಹಾಡು. Show all posts

Friday, November 12, 2010

ಸುಖದಾ ಸ್ವಪ್ನಗಾನ

ಚಿತ್ರ: ಮರೆಯದ ಹಾಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ : ಜಿ.ಕೆ. ವೆಂಕಟೇಶ್
ಗಾಯನ : ಎಸ್. ಜಾನಕಿ
ವರ್ಷ: ೧೯೮೧

ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ

ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ
ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ
ತಪಸಿನಾ ಫಲವಿದೂ ದೈವದಾ ವರವಿದೂ

ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ

ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ
ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ
ನಿಮ್ಮೊಲವಿನಲ್ಲೆ ಮಿ೦ದೂ ನಾನಿ೦ದೂ
ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ

ಶೃತಿಲಯದ ಮಿಲನದಲ್ಲೇ ದೈವೀಕ ನಾದ ಲೀಲೆ
ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೇ ಹೂ ಮಾಲೆ
ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು

ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ