Showing posts with label ಸ್ಪಂದನ. Show all posts
Showing posts with label ಸ್ಪಂದನ. Show all posts

Thursday, June 2, 2011

ಎಂಥ ಮರುಳಯ್ಯಾ ಇದು ಎಂಥಾ ಮರುಳು

ಚಿತ್ರ: ಸ್ಪಂದನ
ಸಾಹಿತ್ಯ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮

ಎಂಥ ಮರುಳಯ್ಯಾ ಇದು ಎಂಥಾ ಮರುಳು
ಬೆಳಗಿನ ಹಿಮದಂತೆ ಹರಿವಾ ನೆರಳು
ಥಳಥಳ ಮಿನುಗಿ ಸೋಕಲು ಕರಗಿ
ಥಳಥಳ ಮಿನುಗಿ ಸೋಕಲು ಕರಗಿ
ಸರಿವುದು ಈ ಬಾಳಿನೆಲ್ಲಾ ತಿರುಳು ಸರಿವುದು ಈ ಬಾಳಿನೆಲ್ಲಾ ತಿರುಳು
ಎಂಥ ಮರುಳಯ್ಯಾ ಇದು ಎಂಥಾ ಮರುಳು

ಹರಿಯುವ ನೀರಿಗೆ ಯಾವ ಹೊಣೆ?
ಹಾರುವ ಹಕ್ಕಿಗೆ ಎಲ್ಲಿ ಮನೆ?
ಬಾಳಿನ ಕಡಲಿನ ತೆರೆಗಳ ಸೀಳಿ
ತಲುಪುವುದಾಚೆಯ ದಡದ ಕೊನೆ ತಲುಪುವುದಾಚೆಯ ದಡದ ಕೊನೆ
ಎಂಥ ಮರುಳಯ್ಯಾ ಇದು ಎಂಥಾ ಮರುಳು

ಸಂಜೆಯ ನೇಸರ ಬಣ್ಣದ ಲೀಲೆ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ
ಕಡಲಿಗೆ ಸಾಲಾಗಿ ಮೂಡುತ ಮುಳುಗುತ
ಬೆನ್ನಟ್ಟಿ ಸಾಗುವ ತೆರೆಗಳ ಹಾಳೆ
ಸೃಷ್ಟಿಯೆ ಸುಂದರ ಸುಳ್ಳಿನ ಮಾಲೆ ಸೃಷ್ಟಿಯೆ ಸುಂದರ ಸುಳ್ಳಿನ ಮಾಲೆ

ಎಂಥ ಮರುಳಯ್ಯಾ ಇದು ಎಂಥಾ ಮರುಳು
ಬೆಳಗಿನ ಹಿಮದಂತೆ ಹರಿವಾ ನೆರಳು
ಥಳಥಳ ಮಿನುಗಿ ಸೋಕಲು ಕರಗಿ
ಥಳಥಳ ಮಿನುಗಿ ಸೋಕಲು ಕರಗಿ
ಸರಿವುದು ಈ ಬಾಳಿನೆಲ್ಲಾ ತಿರುಳು ಸರಿವುದು ಈ ಬಾಳಿನೆಲ್ಲಾ ತಿರುಳು
ಎಂಥ ಮರುಳಯ್ಯಾ ಇದು ಎಂಥಾ ಮರುಳು