Showing posts with label ವಾಣಿ ಜಯರಾಂ. Show all posts
Showing posts with label ವಾಣಿ ಜಯರಾಂ. Show all posts

Wednesday, July 20, 2011

ವಸಂತ ಬರೆದನು ಒಲವಿನ ಓಲೆ

ಚಿತ್ರ: ಬೆಸುಗೆ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ವರ್ಷ: ೧೯೭೬

ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ
ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ

ಹೂಗಳು ದುಂಬಿಯ ಚುಂಬನದಿಂದ ಪುಳಕಿತವಾಗಿಹ ಕಾಲ
ಮಧುಮಯ ಯೌವನ ಮೈ ಮನ ತುಂಬಿ ಮೆರೆದಿಹ ವಸಂತ ಕಾಲ
ತೀರದ ಆಸೆಯ ಆರದ ಉರಿಯ ವಿರಹಿಗೆ ತಂದಿಹ ಕಾಲ
ವಿರಹಿಗೆ ತಂದಿಹ ಕಾಲ
ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ

ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ
ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ
ಬಳ್ಳಿಯು ಹೆಮ್ಮರ ಆಸರೆ ಕೋರಿ ತೋಳನು ಬಳಸುವ ಕಾಲ
ತೋಳನು ಬಳಸುವ ಕಾಲ

Thursday, June 2, 2011

ಭಾವವೆಂಬ ಹೂವು ಅರಳಿ

ಚಿತ್ರ: ಉಪಾಸನೆ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ವಿಜಯಭಾಸ್ಕರ್
ಗಾಯನ : ವಾಣಿ ಜಯರಾಂ
ವರ್ಷ: ೧೯೭೪

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ಸ.ಗ.ಮ.ದ.ಗಾ.ಮಾ.ದ ಸ.ಮ.ದ.ನಿ.ಸಾ.ದ.ನಿ

ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ ಗಾನವೆ ತುಂಬಿದೆ ಈ ಜಗವೆಲ್ಲಾ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನ ನೆನೆಯುತ ಬೇಡಿ ಶಿವನಾ ಕಂಡರು ವಚನವ ಹಾಡಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ಕುಣಿಯಿತು ನಾರದನ ಗಾನದಲ್ಲಿ ತಣಿಯಿತು ಕೃಷ್ಣನ ಮುರಳಿಯಲಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ

Wednesday, March 9, 2011

ನನ್ನೆದೆ ವೀಣೆಯು ಮಿಡಿಯುವುದು

ಚಿತ್ರ: ಕಥಾನಾಯಕ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ,. ವಾಣಿ ಜಯರಾಂ
ವರ್ಷ: ೧೯೮೬

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು.....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಎಂದೂ ಕಾಣೆ ನಂಬು ಜಾಣೆ ನಿನ್ನಾ ಸೇರಲು
ನೂರೂ ಮಾತು ನೂರೂ ಕವಿತೆ ಕಣ್ಣೇ ಆಡಲು
ನಿನ್ನಾ ನೋಟ ನಿನ್ನಾ ಆಟ ನನ್ನಾ ಸೆಳೆಯಲು
ಒಂಟಿ ಬಾಳು ಸಾಕು ಎಂದು ಮನಸೂ ಹೇಳಲು
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಮಿಂಚಿನ ಬಳ್ಳಿಯು ಒಡಲಲಿ ಓಡುತ ನಾಚಿ ನೋಡಿದಾಗ

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಮೇಲೆ ಸೂರ್ಯ ಜಾರಿ ಜಾರಿ ಬಿಸಿಲು ಕರಗಲು
ಸಂಜೆ ಬಂದು ರಂಗು ತಂದು ಮೇಲೆ ಎರಚಲು
ತಂಪು ಗಾಳಿ ಬೀಸಿ ಬಳ್ಳಿ ಬಳುಕಿ ಆಡಲು
ಹಾಗೇ ಹೀಗೆ ಆಡಿ ಹೂವು ಕಂಪು ಚೆಲ್ಲಲೂ
ದುಂಬಿ ನೋಡಿದಾಗ ಸಂಗೀತ ಹಾಡಿದಾಗ
ದುಂಬಿ ನೋಡಿದಾಗ ಸಂಗೀತ ಹಾಡಿದಾಗ
ಮನಸಿನ ಹಕ್ಕಿಯು ಕನಸನು ಕಾಣುತ ದೂರ ಹಾರಿದಾಗ

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

Tuesday, February 8, 2011

ಏನು ಮಾಯವೋ ಏನು ಮರ್ಮವೋ

ಚಿತ್ರ: ಭಾಗ್ಯದ ಲಕ್ಷ್ಮೀ ಬಾರಮ್ಮ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್
ಗಾಯಕರು: , ವಾಣಿ ಜಯರಾಂ
ವರ್ಷ: ೧೯೮೬

ಏನು ಮಾಯವೋ ಏನು ಮರ್ಮವೋ
ಏನು ಮಾಯವೋ ಏನು ಮರ್ಮವೋ ಗೆಲ್ಲುವ ಕುದುರೆಯೇ ಎಂದೂ ಗೆಲುವುದು
ಹಳ್ಳದ ಕಡೆಗೇ ನೀರು ಹರಿವುದು ಹಣವಂತರಿಗೇ ಹಣ ಸೇರುವುದು....
ಏನು ಮಾಯವೋ ಏನು ಮರ್ಮವೋ

ಸಿಮೆಂಟು ಸಿಗದು ಎನ್ನುತಲಿದ್ದರೂ ಮನೆಗಳು ಏಳುತಲಿವೆಯಲ್ಲ
ಪೆಟ್ರೋಲ್ ಬೆಲೆಯು ಏರಿದರೇನು ಹೊಸ ಕಾರುಗಳಿಗೆ ಬರವಿಲ್ಲ
ಜನರಲಿ ಹಣವೇ ಇಲ್ಲ ಎಂದರೂ ಪೇಟೆಯು ಜಾತ್ರೆಯು ದಿನವೆಲ್ಲ
ಯುದ್ಧವೇ ಬರಲಿ ಕ್ಷಾಮವೇ ಬರಲಿ ಸಿನಿಮಾ ಡ್ರಾಮ ನಿಲ್ಲಲ್ಲ
ಇವರಿಗೆ ದೊರೆತ ಈ ಶ್ರೀಮಂತಿಕೆ ನಮಗೆ ಏಕೆ ಸಿಕ್ಕಿಲ್ಲ
ಅಯ್ಯೋ ಮಂಕೆ ತಿಳಿದುಕೋ ನಿಜವ
ನಮಗೆ ಅಂಥ ಲಕ್ಕಿಲ್ಲ ನಮಗೆ ಅಂಥ ಲಕ್ಕಿಲ್ಲ

ಏನು ಮಾಯವೋ ಏನು ಮರ್ಮವೋ

ಲಾಸು ಲಾಸು ಎನ್ನುತಲಿದ್ದರೂ ಬಿಸಿನೆಸ್ ಯಾವುದೂ ಡಲ್ಲಿಲ್ಲ
ಟ್ಯಾಕ್ಸು ರೈಡು ಎಂದರೆ ಏನೂ ಧನಿಕರ ಸಂಖ್ಯೆ ಕರಗಿಲ್ಲ
ತ್ರೀ ಸ್ಟಾರ್ ಫೈವ್ ಸ್ಟಾರ್ ಹೋಟೆಲ್ ಗಳಲೂ ಖಾಲಿ ರೂಮು ಒಂದಿಲ್ಲ
ಬಸ್ಸು ಟ್ರೈನು ಪ್ಲೈನೇ ಆಗಲಿ ಸತ್ತರೂ ಟಿಕೇಟು ಸಿಕ್ಕಲ್ಲ
ಹಣವನು ಮಾಡುವ ಸುಲಭೋಪಾಯ ನಿನಗೆ ಯಾಕೆ ತಿಳಿದಿಲ್ಲ
ನಿನ್ನನು ಬಿಟ್ಟು ಕಂಬಿಯ ಎಣಿಸೋ
ಆಸೆಯು ಇನ್ನೂ ಬಂದಿಲ್ಲ  ಆಸೆಯು ಇನ್ನೂ ಬಂದಿಲ್ಲ

ಏನು ಮಾಯವೋ ಏನು ಮರ್ಮವೋ
ಏನು ಮಾಯವೋ ಏನು ಮರ್ಮವೋ ಗೆಲ್ಲುವ ಕುದುರೆಯೇ ಎಂದೂ ಗೆಲುವುದು
ಹಳ್ಳದ ಕಡೆಗೇ ನೀರು ಹರಿವುದು ಹಣವಂತರಿಗೇ ಹಣ ಸೇರುವುದು....
ಏನು ಮಾಯವೋ ಏನು ಮರ್ಮವೋ ಏನು ಮಾಯವೋ ಏನು ಮರ್ಮವೋ

ಬೆಸುಗೆ ಬೆಸುಗೆ

ಚಿತ್ರ: ಬೆಸುಗೆ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ವರ್ಷ: ೧೯೭೬

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ
ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ
ಭಾವದ ಜೊತೆಗೆ ಗೀತೆಯ ಬೆಸುಗೆ
ಗೀತೆಯ ಜೊತೆ ಸಂಗೀತದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಯೌವನದಲ್ಲಿ ಮೋಹದ ಬೆಸುಗೆ
ಮೈ ಮನದಲ್ಲಿ ಬಯಕೆಯ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಎರಡು ಮನಸಿಗೆ ಒಲವಿನ ಬೆಸುಗೆ
ಎರಡು ಬಾಳಿನ ಬಂಧನ ಬೆಸುಗೆ
ಎರಡು ಮನಸಿಗೆ ಒಲವಿನ ಬೆಸುಗೆ
ಎರಡು ಬಾಳಿನ ಬಂಧನ ಬೆಸುಗೆ
ಮಧುರ ಮಿಲನಕೆ ಪ್ರೀತಿಯ ಬೆಸುಗೆ
ಜನುಮ ಜನುಮಕೂ ಆತ್ಮದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜನುಮ ಜನುಮಕೂ ಆತ್ಮದ ಬೆಸುಗೆ

Friday, December 3, 2010

ಹಾಡು ಹಳೆಯದಾದರೇನು

ಚಿತ್ರ : ಮಾನಸ ಸರೋವರ
ಸಾಹಿತ್ಯ : ಡಾ|| ಜಿ.ಎಸ್.ಶಿವರುದ್ರಪ್ಪ
ಸಂಗೀತ : ವಿಜಯಭಾಸ್ಕರ್
ಗಾಯಕರು : ವಾಣಿ ಜಯರಾಂ
ವರ್ಷ: ೧೯೮೩

ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ
ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ

ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ

ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ

ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ

ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ

Tuesday, November 9, 2010

ಸವಿನೆನಪುಗಳು ಬೇಕು

ಚಿತ್ರ: ಅಪರಿಚಿತ
ಸಾಹಿತ್ಯ: ರಾಮದಾಸ ನಾಯ್ಡು
ಸಂಗೀತ: ಎಲ್. ವೈದ್ಯನಾಥನ್
ಗಾಯಕರು : ವಾಣಿ ಜಯರಾಂ
ವರ್ಷ: ೧೯೭೮

ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ

ಸವಿನೆನಪುಗಳು ಬೇಕು ಸವಿಯಲೀ ಬದುಕು

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನ ಎದೆ ಬಡಿತ ಗುಂಡಿನ ದನಿಗಿರಿದು
ಮಾಸುತಿದೆ ಕನಸು

ಸವಿನೆನಪುಗಳು ಬೇಕು ಸವಿಯಲೀ ಬದುಕು

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂಧಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸುಕಾಗಿದೆ
ಅರಳುವ ಹೂವೊಂದು ಕಮರುವ ಭಯದಲೀ
ಸಾಗುತಿದೆ ಬದುಕು

ಸವಿನೆನಪುಗಳು ಬೇಕು ಸವಿಯಲೀ ಬದುಕು

Thursday, October 7, 2010

ತೆರೆದಿದೆ ಮನೆ ಓ ಬಾ ಅತಿಥಿ

ಚಿತ್ರ: ಹೊಸಬೆಳಕು 
ಸಾಹಿತ್ಯ: ಕುವೆಂಪು
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ , ವಾಣಿ ಜಯರಾಂ
ವರ್ಷ: ೧೯೮೨ 

ಆ......   ತಾ... ನ.. ನಾ...
ತೆರೆದಿದೆ ಮನೆ ಓ ಬಾ ಅತಿಥಿ
ಆ......
ತೆರೆದಿದೆ ಮನೆ ಓ ಬಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ