Showing posts with label ೧೯೭೩. Show all posts
Showing posts with label ೧೯೭೩. Show all posts

Monday, June 6, 2011

ಸಂತೋಷ ಅಹಾ ಅಹಾ ಸಂಗೀತ ಓಹೋ ಓಹೋ

ಚಿತ್ರ: ಎಡಕಲ್ಲು ಗುಡ್ಡದ ಮೇಲೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಪಿ. ಸುಶೀಲ
ವರ್ಷ: ೧೯೭೩

ಸಂತೋಷ ಅಹಾ ಅಹಾ ಸಂಗೀತ ಓಹೋ ಓಹೋ
ರಸಮಯ ಸಂತೋಷ, ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ

ಏಳು ಸ್ವರಗಳ ಭಾವಗೀತೆಯ ಸಂಗೀತ ಏಳು ಬಣ್ಣದ ಭೂಮಿ ರಮಣಿಗೆ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ಹಾದಿಗೆಲ್ಲಾ ಹೂವು ಚೆಲ್ಲಿ
ಹಾದಿಗೆಲ್ಲಾ ಹೂವು ಚೆಲ್ಲಿ ಓಡಿ ಓಡಿ ಸಾಗುವಲ್ಲಿ ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ

ಸಂತೋಷ ಅಹಾ ಅಹಾ ಸಂಗೀತ ಹೆಹೇ ಹೆಹೇ
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ

ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ ಸುಯ್ ಸುಯ್ ಎನ್ನುತ ಬೀಸುವ ಗಾಳಿಗೆ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸನ್ನೆ ಮಾಡಿ ಕೈಯಾ ಬೀಸಿ
ಸನ್ನೆ ಮಾಡಿ ಕೈಯಾಬೀಸಿ ಗುಟ್ಟು ಹೇಳಿ ಬೆಟ್ಟ ಸಾಲು ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ.

ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ಉಬ್ಬಿ ಹಬ್ಬಿ ಬಾಚಿ ತಬ್ಬಿ
ಉಬ್ಬಿ ಹಬ್ಬಿ ಬಾಚಿ ತಬ್ಬಿ ನಾಚಿ ನಿಂತ ಹೂವು ಬಳ್ಳಿ ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ