Showing posts with label ಸರಿತಾ. Show all posts
Showing posts with label ಸರಿತಾ. Show all posts

Thursday, July 7, 2011

ಹಾಯಾಗಿ ಕುಳಿತಿರು ನೀನು



ಚಿತ್ರ: ಹಾಲು ಜೇನು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್ ಕುಮಾರ್, ಸರಿತಾ
ವರ್ಷ: ೧೯೮೨

ಲೇ ಲೇ..
ಏನ್ರೀ..
ಒಂದ್ ಮಾತು
ಹೇಳಿ
ಹೇಳಿದ್ರೆ ಕೇಳ್ತೀಯಾ?
ನಿಮ್ ಮಾತ್ ಯಾವತ್ ಕೇಳಿಲ್ಲ?
ಹಾಗಾದ್ರೆ, ಆ ಪಾತ್ರೆ ಅಲ್ಲಿಡು
ಹೂಂ.. ಇಟ್ಟೆ
ಬಾ ಇಲ್ಲಿ
ಹೂಂ?
ಬಾರೆ ಅಂದ್ರೆ
ಹೂಂ..
ಕೂತ್ಕೋ ಇಲ್ಲಿ ಮಂಚದ್ ಮೇಲೆ
ಏನ್ರೀ ಇದು ಇಷ್ಟೊತ್‍ನಲ್ಲಿ
ಅಯ್ಯಯ್ಯೋ! ಅದಕ್ಕಲ್ವೇ..

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ
ಮನೆ ಕೆಲ್ಸ ಯಾರ್ರೀ ಮಾಡೋದು ನಿಮ್ಮಾವನ?
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ

ಅಯ್ಯಯ್ಯೋ ಏನ್ರೀ ಇದು ಅವತಾರ?
ಗಂಡ್ಸಾಗ್ ಹುಟ್ಟಿ ನೀವ್ ಅಡುಗೆ ಮಾಡ್ತೀರ?

ಭೀಮಸೇನ ನಳಮಹರಾಜರು ಗಂಡಸರಲ್ಲವೇ
ಭೀಮಸೇನ ನಳಮಹರಾಜರು ಗಂಡಸರಲ್ಲವೇ
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ ಮಹನೀಯರಲ್ಲವೇ
ನೆನ್ನೆಯ ತನಕ ನೀನೆ ದುಡಿದೆ ಈ ಸಂಸಾರಕೆ ಜೀವ ತೇದೆ
ಈ ದಿನವಾದರೂ ನಿನ್ನ ಸೇವೆಯ ಮಾಡುವೆ ಚಿನ್ನ
ಪಬಬಂ ಪಬಬಂ ಪಬಬಂ

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ತರರಂ ತರರಂ ತರರಂ

ಯಾ..ಯಾಕ್ರೀ ಕಣ್ಣೀರು
ಇದು ಕಣ್ಣೀರಲ್ವೇ ಪನ್ನೀರು ಪನ್ನೀರು
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ?
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ?
ಮನಸನು ಅರಿತು ನಡೆಯುತಲಿರಲು ಚಿಂತೆಯ ಮಾತೇಕೆ
ನೀ ನಗುತಲಿರಲು ನಮ್ಮೀ ಮನೆಗೆ ಆ ಸ್ವರ್ಗವೇ ಜಾರಿದಂತೆ
ಹೆಂಡತಿ ಸೇವಕಿ ಅಲ್ಲ ಗಂಡನು ದೇವರು ಅಲ್ಲ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ