Showing posts with label ೧೯೮೧. Show all posts
Showing posts with label ೧೯೮೧. Show all posts

Wednesday, June 1, 2011

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ

ಚಿತ್ರ: ಭಾಗ್ಯವಂತ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಪೂರ್ಣಚಂದ್ರ
ವರ್ಷ: ೧೯೮೧


ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ನೀನಾಡೋ ಮಾತೆಲ್ಲಾ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ
ನೀನಾಡೋ ಮಾತೆಲ್ಲಾ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ
ನೀನೊಂದು ಸಕ್ಕರೆಯ ಬೊಂಬೆಯಂತೆ ಮಗುವೆ ನೀ ನನ್ನ ಪ್ರಾಣದಂತೆ
ನನ್ನ ಪ್ರಾಣದಂತೆ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ಆ ದೇವ ನಮಗಾಗಿ ತಂದ ಸಿರಿಯೇ, ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಆ ದೇವ ನಮಗಾಗಿ ತಂದ ಸಿರಿಯೇ, ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಅಳಲೇನು ಚಂದ ನನ್ನ ಪುಟ್ಟ ದೊರೆಯೇ ಹಾಯಾಗಿ ಮಲಗು ಜಾಣ ಮರಿಯೇ
ನನ್ನ ಜಾಣ ಮರಿಯೇ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ಮಾತು ಒಂದು ಮಾತು

ಚಿತ್ರ: ಮುನಿಯನ ಮಾದರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಸುಲೋಚನ
ವರ್ಷ: ೧೯೮೧

ಮಾತು ಒಂದು ಮಾತು ಮಾತು ಒಂದು ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು

ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು

ಮಾತು ಕಿವಿ ಮಾತು ಮಾತು ಸವಿ ಮಾತು

ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹಗಲಿನಲ್ಲೂ ನೂರು ಕನಸು ಕಾಣುವ ಸುಖದ ಮಾತು

ನಿನ್ನ ತಣಿಸುವ ಇನಿ ಮಾತು ಕಣ್ಣ ಕುಣಿಸುವ ಗಿಳಿ ಮಾತು
ಮದನನನ್ನು ಕಂಡ ರತಿಯು ಮೋಹಿಸಿ ಅಂದ ಮಾತು
ಆಡುವ ಆಸೆ ಬಂತು

ಆಹಾ ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು ಮಾತು ಸವಿ ಮಾತು

ಪ್ರೇಮಿ ಆಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಪ್ರೇಮಿ ಆಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಒಲವಿನಿಂದ ಸೇರಿದಾಗ ಆಡುವ ಕಣ್ಣ ಮಾತು

ಎಂದು ಕೇಳದ ಹೊಸ ಮಾತು ಎಲ್ಲ ರಸಿಕರ ಮನೆ ಮಾತು
ಪ್ರಣಯ ಕಾವ್ಯ ಹರುಷದಿಂದ ಹಾಡಿದ ಕವಿಯ ಮಾತು
ಆಡುವ ಆಸೆ ಬಂತು

ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು ಮಾತು ಸವಿ ಮಾತು

ಪ್ರೇಮದಲ್ಲಿ ಸ್ನೇಹದಲ್ಲಿ

ಚಿತ್ರ : ರಂಗನಾಯಕಿ
ಸಾಹಿತ್ಯ: ಎಂ. ಎನ್. ವ್ಯಾಸರಾವ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಹಾಯ್ ಬೇಬೀಸ್...
ಪ್ರೇಮದಲ್ಲಿ ಸ್ನೇಹದಲ್ಲಿ ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ
ಸೋ ನಾವೆಲ್ಲ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಮೈ ಡಿಯರ್ಸ್
ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ನನ್ನ ಭಾಷೆ ಚೌ ಚೌ ಭಾಷೆ ನನ್ನ ಆಸೆ ಮಸಾಲ ದೋಸೆ
ನನ್ನ ಭಾಷೆ ಚೌ ಚೌ ಭಾಷೆ ನನ್ನ ಆಸೆ ಮಸಾಲ ದೋಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ಶಾಸ್ತ್ರೀಜಿ ರೀಟಾಜಿ ತಂಗಮ್ಮ ನಿಂಗಮ್ಮ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಓಹ್ ಡಿಯರ್ಸ್ ಕ್ಯೂಂ ಭಾಯ್

ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ನನ್ನ ಮಾತು ಕೇಸರಿ ಭಾತು ನನ್ನ ಕೋಪ ಖಾರ ಭಾತು
ನನ್ನ ಮಾತು ಕೇಸರಿ ಭಾತು ನನ್ನ ಕೋಪ ಖಾರ ಭಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು ಕನ್ನಡ ಮಾತು
ಅಬ್ದುಲ್ಲ ಸೈದುಲ್ಲ ಆಂಟೋನಿ ಅವಧಾನಿ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಮೈ ಡಿಯರ್ಸ್
ವಾಟ್ ಡಾರ್ಲಿಂಗ್ ವಾಟ್ ಡು ಯು ಸೇ

ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ಕನ್ನಡ ನಾಡಿನ ರಸಿಕರ ಮನವ

ಚಿತ್ರ : ರಂಗನಾಯಕಿ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ಎಂ.ರಂಗರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ಕಲೆಯ ರಸ ಗಂಗೆಯಲ್ಲಿ ನಿಂದ ಸೌಂದರ್ಯವಲ್ಲಿ
ಕಲೆಯ ರಸ ಗಂಗೆಯಲ್ಲಿ ನಿಂದ ಸೌಂದರ್ಯವಲ್ಲಿ
ಮಾತಂಗಿ ತಂಗಿ ಲಲಿತ ಲತಾಂಗಿ
ತಂಗಿ ಲಲಿತ ಲತಾಂಗಿ

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ಬಣ್ಣದ ಬದುಕಿಂದ
ಬಣ್ಣದ ಬದುಕಿಂದ ಚಿನ್ನದ ಬಾಳಿಗೆ ಮನ್ನಣೆ ಪಡೆದ
ಭಾಗ್ಯವತಿ ಸೌಭಾಗ್ಯವತಿ

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ನಿನ್ನ ಹೃದಯ ಹಸಿರಾಗಿರಲಿ
ನಿನ್ನ ಹೃದಯ ಹಸಿರಾಗಿರಲಿ ನಿನ್ನ ನೆನಪು ಸವಿಯಾಗಿರಲಿ
ಹೋಗಿ ಬಾ ಹೋಗಿ ಬಾ ಹೋಗಿ ಬಾ
ದೀರ್ಘಸುಮಂಗಲಿ ದೀರ್ಘಸುಮಂಗಲಿ
ದೀರ್ಘಸುಮಂಗಲಿ ದೀರ್ಘಸುಮಂಗಲಿ

Friday, January 28, 2011

ಪ್ರೀತಿಸಿ ನೋಡು ಪ್ರೇಮಿಸಿ ನೋಡು



ಚಿತ್ರ: ಪ್ರೀತಿಸಿ ನೋಡು
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು
ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ಪ್ರೀತಿಸಿ ನೋಡು ಪ್ರೀತಿಸಿ ನೋಡು
ಪ್ರೀತಿಸಿ ನೋಡು ಪ್ರೀತಿಸಿ ನೋಡು

ಪ್ರೀತಿಯೇ ದೇವನು ನೀಡಿದ ಕೊಡುಗೆ ಪ್ರೀತಿಯೇ ಆಗಲಿ ಮನಸಿನ ಉಡುಗೆ
ಪ್ರೀತಿಯೇ ಒಂದು ಪಾವನ ಜ್ಯೋತಿ
ಪ್ರೀತಿಯೇ ಒಂದು ಪಾವನ ಜ್ಯೋತಿ ಪ್ರೀತಿಯ ಬಾಳಿಗೆ ಪ್ರೀತಿಯೇ ನೀತಿ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ತಾಯಿಯ ಮಡಿಲಲಿ ಪ್ರೀತಿಯ ಬೆಸುಗೆ ಹರೆಯದ ವಯಸಲಿ ಪ್ರೀತಿಯ ಒಸಗೆ
ಪ್ರೀತಿಯ ಭಾವದ ಆಳ ಅಪಾರ
ಪ್ರೀತಿಯ ಭಾವದ ಆಳ ಅಪಾರ ಪ್ರೀತಿಯೇ ಬಾಳಿಗೆ ಅಮೃತಧಾರ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ಪ್ರೀತಿಸಿ ನೋಡು ಪ್ರೀತಿಸಿ ನೋಡು
ಪ್ರೀತಿಸಿ ನೋಡು ಪ್ರೀತಿಸಿ ನೋಡು

ಪ್ರೀತಿಯೇ ಲೋಕಕೆ ಆಸೆಯ ಹೊನಲು ಪ್ರೀತಿಯು ಇದ್ದರೆ ದಿನ ಹೊಸ ಹಗಲು
ಮನಸಿನ ಭಾವಕೆ ಪ್ರೀತಿಯೇ ಚಿಲುಮೆ
ಮನಸಿನ ಭಾವಕೆ ಪ್ರೀತಿಯೇ ಚಿಲುಮೆ ಸನಿಹಕೆ ತರುವುದೆ ಪ್ರೀತಿಯ ಹಿರಿಮೆ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

Tuesday, December 7, 2010

ಒಲುಮೆ ಪೂಜೆಗೆಂದೇ



ಚಿತ್ರ: ಅನುಪಮ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೧

ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ...

ಮಮತೆ ಮೀಟಿ ಮಿಲನ ಕಂಡೆ ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರೆಯ ತೂಗಿ ಸನಿಹ ಬಂದೆ ಎಲ್ಲ ಪ್ರೀತಿ ಸಮ್ಮೋಹ ತಂದೆ
ಹರುಷ ತಂದೆ ಹಾದಿಯೇ ಚಂದ
ಹರುಷ ತಂದೆ ಹಾದಿಯೇ ಚಂದ ಒಲವಿನಾಸರೆ ರೋಮಾಂಚ ಬಂಧ

ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ

ಜೊತೆಯ ಸೇರಿ ಬರುವೆ ನಾನು ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೆ ನಾನು ನನಗೆ ನೀನು
ನಿನಗೆ ನಾನು ನನಗೆ ನೀನು ಪ್ರೇಮ ಜೀವನ ಎಂದೆಂದೂ ಜೇನು

ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ...
ಸಂಜೀವನ... ಸಂಜೀವನ...

Friday, November 12, 2010

ಸುಖದಾ ಸ್ವಪ್ನಗಾನ



ಚಿತ್ರ: ಮರೆಯದ ಹಾಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ : ಜಿ.ಕೆ. ವೆಂಕಟೇಶ್
ಗಾಯನ : ಎಸ್. ಜಾನಕಿ
ವರ್ಷ: ೧೯೮೧

ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ

ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ
ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ
ತಪಸಿನಾ ಫಲವಿದೂ ದೈವದಾ ವರವಿದೂ

ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ

ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ
ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ
ನಿಮ್ಮೊಲವಿನಲ್ಲೆ ಮಿ೦ದೂ ನಾನಿ೦ದೂ
ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ

ಶೃತಿಲಯದ ಮಿಲನದಲ್ಲೇ ದೈವೀಕ ನಾದ ಲೀಲೆ
ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೇ ಹೂ ಮಾಲೆ
ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು

ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ

Tuesday, November 9, 2010

ದೇವರ ಆಟ ಬಲ್ಲವರಾರು



ಚಿತ್ರ: ಅವಳ ಹೆಜ್ಜೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು : ಎಸ್. ಜಾನಕಿ
ವರ್ಷ: ೧೯೮೧

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು....

ಹೊಸ ಹೊಸ ರಾಗ ಅನುದಿನ ಮೂಡಿ ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆಯೊಮ್ಮೆ ನೋವಲಿ ಹೃದಯ ಹಿಂಡುವುದೊಮ್ಮೆ
ಬಾಳಿನ ಈ ಹಾಡಿನ ರೀತಿ ..
ಬಾಳಿನ ಈ ಹಾಡಿನ ರೀತಿ  ಯಾರು ಇಂದು ಬಲ್ಲವರು

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು...

ಕಾನನ ಬರಲಿ ಕೊರಕಲೆ ಇರಲಿ ಓಡುವ ನದಿಯು ಸಾಗುವ ಹಾಗೆ
ಹೂಬನವಿರಲಿ ಮರುಭೂಮಿ ಬರಲಿ ನಿಲ್ಲದೆ ಗಾಳಿ ಬೀಸುವ ಹಾಗೆ
ನಿಲ್ಲದ ಈ ಪಯಣದ ಗುರಿಯ..
ನಿಲ್ಲದ ಈ ಪಯಣದ ಗುರಿಯ ಯಾರು ಇಂದು ಕಂಡವರು

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು

Monday, October 25, 2010

ನಾನೇನು ನೀನೇನು ಅವನೇನು



ಚಿತ್ರ: ಗಾಳಿಮಾತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

ಕಪ್ಪನೆಯ ಮೋಡಗಳು ಕರಗುತ ನೀರಾಗಿ
ಮಳೆಯನು ನೆಲದಲಿ ಹರಿಸುತಿದೆ
ನೆಲವೆಲ್ಲ ನಗುನಗುತ ಹಚ್ಚನೆ ಹಸಿರಾಗಿ
ಬೆಳೆಯನು ಜನರಿಗೆ ಕೊಡುತಲಿರೆ
ಸಂತೋಷದಿ ನೀ ಬಾಳದೇ
ಹೇ ಸಂತೋಷದಿ ನೀ ಬಾಳದೇ
ಏಕೆ ಹೊಡೆದಾಡಿ ಕಾದಾಡುವೇ

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

ಗಾಳಿಯನು ನೀರನ್ನು ತಂದವ ನೀನಲ್ಲ
ಈ ನಿಜ ಏತಕೆ ಅರಿತಿಲ್ಲ
ಹಣ್ಣಿನಲಿ ಸಿಹಿಯನ್ನು ತಂದವ ನೀನಲ್ಲ
ಅರಿಯುವ ಜಾಣ್ಮೆಯೂ ಏಕಿಲ್ಲ
ನಿನದಲ್ಲದ ಸಂಪತ್ತಿಗೆ
ಹೇ ನಿನದಲ್ಲದ ಈ ಸಂಪತ್ತಿಗೆ ಏಕೆ ಬಡಿದಾಡಿ ಹೋರಾಡುವೆ

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

Thursday, October 21, 2010

ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ



ಚಿತ್ರ: ಮುನಿಯನ ಮಾದರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನು ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನು ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು ಓಡುತಿವೆ ಕೌಸುಗಳು
ಊರಿಂದ ಬಂದನು ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನು ಮಿಸ್ಟರ್ ಮಾರನು

ಹೈ ಸ್ಕೂಲು ದಾಟಿರುವ ಕಾಲೇಜು ಮುಟ್ಟಿರುವ ಭೂಪ ಹಳ್ಳೀಗೆ ಬಂದಾಗ
ಸೂಟನ್ನು ಧರಿಸಿರುವ ಹ್ಯಾಟನ್ನು ಹಾಕಿರುವ ನನ್ನೀ ಸ್ಟೈಲನ್ನು ಕಂಡಾಗ
ಗಾರ್ಲೆಂಡ್ ಮಾಡದೆಲೆ ವೆಲ್ಕಂ ಹೇಳದೆಲೆ ಏಕೆ ನಿಂತಿರುವೆ
ಹೇಳೆ ನನ್ನ ಅತ್ತೆ ಮಗಳೇ

ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು

ಹುರಿ ಮೀಸೆ ಬಂದಾಯ್ತು, ನನಗೀಗ ವಯಸಾಯ್ತು, ನೋಡು ಪರ್ಸನಾಲಿಟಿ ಹೇಗಾಯ್ತು
ನಿನ್ನಲ್ಲಿ ಮನಸಾಯ್ತು, ನಿನ್ನಾಸೆ ಹೆಚ್ಚಾಯ್ತು, ರಾತ್ರಿ ನಿಂದೇನೆ ಡ್ರೀಂ ಆಯ್ತು
ರೋಮಿಯೊ ನಾನಾಗಿ, ಜೂಲಿಯಟ್ ನೀನಾಗಿ, ಲವ್ವು ಮಾಡುವೆನು
ಕೇಳೆ ನನ್ನ್ ಮಾವನ್ ಮಗಳೆ

ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು

Saturday, October 9, 2010

ನಮ್ಮೂರ ಮಂದಾರ ಹೂವೇ



ಚಿತ್ರ : ಆಲೆಮನೆ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೇ

ಕಣ್ಣಲ್ಲೇ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ

ಕಣ್ಣಲ್ಲೇ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ

ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ
ಸೊಗಸಾದ ಕಾರಂಜಿ ಬಿರಿದೆ

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೇ

ಒಡಲಾಳ ಮೊರೆದು ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ

ಒಡಲಾಳ ಮೊರೆದು ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ

ತೀರದ ಮೋಹದ ಇನಿದಾದ ಆನಂದ ತಂದೆ
ಇನಿದಾದ ಆನಂದ ತಂದೆ

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ಬರಿದಾದ ಮನದಲ್ಲಿ ಮಿನುಗು

ನಮ್ಮೂರ ಸಂತೇಲಿ



ಚಿತ್ರ : ಗಾಳಿ ಮಾತು
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್ - ನಾಗೇಂದ್ರ
ಗಾಯಕರು : ರಮಣ(ರೇಣುಕ) ಮತ್ತು ನಾಗೇಂದ್ರ
ವರ್ಷ: ೧೯೮೧ 

ಹೇ...ಹೇ....
ಲಲ...ಲಲ...ಲಲ...

ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೇ
ನಿನ್ನ ನೋಡಿ ನಕ್ಕೋನು ನಾನ್ ತಾನೇ
ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೇ
ನಿನ್ನ ನೋಡಿ ನಕ್ಕೋನು ನಾನ್ ತಾನೇ

ನಮ್ಮೂರ ಜಾತ್ರೆಲಿ ಪೇಟೇಯ ಬೀದಿಲೀ
ಜಡೆಯನ್ನು ಎಳೆದವ ನೀನ್ ತಾನೇ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
ನಮ್ಮೂರ ಜಾತ್ರೆಲಿ ಪೇಟೇಯ ಬೀದಿಲೀ
ಜಡೆಯನ್ನು ಎಳೆದವ ನೀನ್ ತಾನೇ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ

ಹೊಡೆದರೆ ನಿನ್ನಾ ಸುಮ್ಮನೆ ಬಿಡುವೆನೆ ಸುಳ್ಳೇಕೆ ಆಡ್ತಿ
ಹೊಡೆದರೆ ನಿನ್ನಾ ಸುಮ್ಮನೆ ಬಿಡುವೆನೆ ಸುಳ್ಳೇಕೆ ಆಡ್ತಿ

ಬಿದ್ದರೂ ಮೀಸೆ ಮಣ್ಣಾಗ್ಲಿಲ್ಲ ಎಂದೇಕೆ ಹೇಳ್ತಿ
ಬಿದ್ದರೂ ಮೀಸೆ ಮಣ್ಣಾಗ್ಲಿಲ್ಲ ಎಂದೇಕೆ ಹೇಳ್ತಿ

ನಮ್ಮಲಿ ಏಕೆ ಜಗಳವು ಇನ್ನೂ ನೀನೇ ನನ್ ಹೆಂಡ್ತಿ
ನಮ್ಮಲಿ ಏಕೆ ಜಗಳವು ಇನ್ನೂ ನೀನೇ ನನ್ ಹೆಂಡ್ತಿ

ನನ್ನಲಿ ಹೇಳು ಹಾಗಾದರೆ ನೀ ಸಂಬಳ ಏನ್ ತರ್ತಿ
ನನ್ನಲಿ ಹೇಳು ಹಾಗಾದರೆ ನೀ ಸಂಬಳ ಏನ್ ತರ್ತಿ

No Job...No vacancy

You....Get Out....
I don't see...I don't see...

I will see....I will see....

ಬಯಸದೆ ಬಳಿ ಬಂದೆ



ಚಿತ್ರ: ಗಾಳಿಮಾತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೧

ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ

ಉರಿ ಬಿಸಿಲು ತಂಪಾಯ್ತು ನಿನ್ನ ನಾ ನೊಡಲು
ಮೈ ಏಕೊ ಬಿಸಿ ಆಯ್ತು ನೀನು ಬಳಿ ನಿಂತು ನಗಲು
ನೀ ನಡೆವ ಹಾದಿಯಲಿ ಕಲ್ಲು ಮೃದುವಾಯಿತು
ಮುಳ್ಳೆಲ್ಲ ಹೂವಾಗಿ ಭೂಮಿಯೇ ಸ್ವರ್ಗವಾಯ್ತು
ನಿಂತಲ್ಲೆ ನೀರಾಗಿ ನಾ ಕರಗಿಹೋದೆ

ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ

ಸೊಗಸೆಂಬ ನುಡಿಗಿಂತ ಸೊಗಸು ಈ ರೂಪವು
ಹಿತವೆಂಬ ನುಡಿಗಿಂತ ಹಿತವು ಈ ನಿನ್ನ ಒಲವು

ನಿನ್ನಿಂದ ಆನಂದ ಇಂದು ನಾ ಕಂಡೆನು
ಈ ನಿನ್ನ ಸ್ನೇಹವನು ಇನ್ನು ಎಂದೆಂದು ಬಿಡೆನು
ಸವಿಯಾದ ಮಾತಿಂದ ಹೊಸ ಬಾಳು ತಂದೆ

ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ

Wednesday, September 29, 2010

ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ



ಚಿತ್ರ: ಗಾಳಿ ಮಾತು
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಜಾನಕಿ
ವರ್ಷ: ೧೯೮೧
 
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ

ಅರಳಿರುವ ಹೂವಿನಲ್ಲೀ ನಿನ್ನ ನೋಟವಾ
ಹರಿಯುತಿಹ ನೀರಿನಲ್ಲೀ ನಿನ್ನ ಓಟವಾ
ಇಂಪಾದ ಗಾನದಲ್ಲೀ ನಿನ್ನ ಮೊಗದ ಭಾವವಾ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ ನಾಟ್ಯದಲ್ಲೀ ನಿನ್ನ ಚಂದವಾ
ತಂಪಾದ ಗಾಳಿಯಲ್ಲೀ ನೀನಾಡೋ ಆಟವಾ
ದಿನವೆಲ್ಲಾ ನಾ ಕಂಡೇ ನಾ ಕಂಡು ಬೆರೆಗಾದೆ...

ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ...

ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದಾ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲಾ ನಿನ್ನಲ್ಲೇ ಮನಸೆಲ್ಲಾ...

ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ...
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ