Showing posts with label ೧೯೮೪. Show all posts
Showing posts with label ೧೯೮೪. Show all posts

Monday, June 6, 2011

ಅರಳಿದೆ ತನು ಮನ ನೋಡುತ ನಿನ್ನ



ಚಿತ್ರ: ಅಪೂರ್ವ ಸಂಗಮ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಡಾ|| ರಾಜ್ ಕುಮಾರ್, ಎಸ್.ಜಾನಕಿ
ವರ್ಷ: ೧೯೮೪

ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
ಅರಳಿದೆ ತನು ಮನ ನೋಡುತ ನಿನ್ನ

ಚಲಿಸುವ ತಂಗಾಳಿಯು ಚೆಲುವೆ ನಿನ್ನ ನೋಡಿ
ನಲಿಯುತ ಓಡಿದೆ ಮುಂಗುರುಳ ಹಿಡಿದು ಆಡಿ
ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ ಈ ನಿನ್ನ ಅಂದ ನೋಡಿ
ಸುಖ ತರುತಿದೆ ಹಿತ ಕರೆದಿದೆ ಚಲುವ
ಅರಳಿದೆ ತನು ಮನ ನೋಡುತ ನಿನ್ನ

ಎದೆಯಲಿ ಹೊಮ್ಮಿ ಹೊಮ್ಮಿ ನೂರು ಬಯಕೆ ಈಗ
ಕೆಣಕಲು ಸೋತೆನು ನನ್ನಿನಿಯ ನಿನ್ನ ನೋಡಿ
ಪ್ರಣಯದ ಸಂಗೀತದ ಇಂಪು ಕಿವಿಯ ತುಂಬಿ
ಕನಸನು ಕಂಡೆನು ಸಂಗಾತಿಯೇ ನಿನ್ನ ಸೇರಿ
ಇನ್ನು ಬಿಡುವೆನೇ ನನ್ನೇ ಕೊಡುವೆ ನಾ ಚೆಲುವೆ

ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ

Monday, November 8, 2010

ಉಷೆ ಮೂಡಿದಾಗ



ಚಿತ್ರ: ಪ್ರೀತಿವಾತ್ಸಲ್ಯ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೪

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ

ಹೂವರಳಿ ನಿಂತ ವೇಳೆ ಕಣ್ಮುಂದೆ ಬಂದಿತಲ್ಲೇ
ಪ್ರಿಯೆ ನಿನ್ನ ಕಾಡಿಗೆ ಕಣ್ಣ ಆ ನೋಟದಂದವೇ
ಕರೆ ನೀಡಿ ನೋಟದಲ್ಲಿ ನೀ ನಿಂತೆ ದೂರದಲ್ಲಿ
ಬಳಿ ಬಂದೆ ಬಯಸಿ ನಿನ್ನ ನೀ ಹೋದೆ ಕಾಣದೆ
ಆ ನೆನಪು ಕಾಡಿದೆ ನನ್ನ ಈ ಬೇಗೆ ತಾಳೆನು ಚಿನ್ನ

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ

ಕಾವೇರಿ ನೀರಿನಲ್ಲೂ ಕನ್ನಡದ ಕಾವ್ಯದಲ್ಲೂ
ಬೇಲೂರ ಬಾಲೆಯಲ್ಲೂ ನಾ ಕಂಡೆ ನಿನ್ನನು
ಒಂದೊಂದು ಭಂಗಿಯಲ್ಲೂ ಒಂದೊಂದು ಭಾವದಲ್ಲೂ
ಒಂದೊಂದು ಮಾತಿನಲ್ಲೂ ನೀ ಸೆಳೆದೆ ನನ್ನನು
ನೀ ನಿಂತೆ ಕಣ ಕಣದಲ್ಲೂ ನನ್ನೆದೆಯ ಉಸಿರುಸಿರಲ್ಲೂ

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ

ಸ್ನೇಹಿತರೇ ನಿಮಗೆ ಸ್ವಾಗತ



ಚಿತ್ರ: ಪ್ರೀತಿವಾತ್ಸಲ್ಯ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೪

ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಓ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ

ರಸಪೂರ್ಣ ರಂಗಾದ ಸಂಜೆಯಲ್ಲಿ
ಸವಿ ಸ್ನೇಹ ತಂದಂಥ ವೇಳೆಯಲ್ಲಿ
ನಾ ಹಾಡುವ ಈ ಹಾಡಿನ ತಾಳಮೇಳ ಸೇರಿ ನಿಮ್ಮ ಕೂಗಲೀಗ
ಕ್ಷಣವೊಂದು ಕಣ್ಣೋಟ ಸೇರಿದಾಗ
ಸವಿ ಮಾತು ತಮ್ಮಲ್ಲೇ ಆಡಿದಾಗ
ಆ ಮೌನದ ಪಿಸುಮಾತಿಗೆ ಸಾಟಿಯಾದ ಯಾವ ಪ್ರೇಮ ಕಾವ್ಯವಿಲ್ಲ
ಹೃದಯ ಹಗುರಾಗಿ ಇರಲಿ
ಪ್ರೀತಿವಾತ್ಸಲ್ಯ ನಗಲಿ

ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಹೇ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ

ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ
ಒಲಿದಂತ ಪತಿಯಲ್ಲಿ ಪತ್ನಿಯ ಪ್ರೀತಿ
ಒಡಹುಟ್ಟಿದ ಸಂಬಂಧವು ತರುವಂಥ ಸವಿಯಾದ ಸುಮಧುರ ಪ್ರೀತಿ
ಪ್ರಿಯನಲ್ಲಿ ಪ್ರೆಯಸಿಯು ತೋರುವ ಪ್ರೀತಿ
ನಿಜ ಸ್ನೇಹ ತಂದಂಥ ನಿರ್ಮಲ ಪ್ರೀತಿ
ಈ ಪ್ರೀತಿಯೂ ವಿಶ್ವಾಸವೂ ಬಾಳಲ್ಲಿ ಇರಲೆಂದು ಶಾಶ್ವತ ರೀತಿ
ಮನಸು ಹಾಯಾಗಿ ಇರಲಿ
ಪ್ರೀತಿವಾತ್ಸಲ್ಯ ನಗಲಿ

ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಹೇ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ

Saturday, October 9, 2010

ಓ ಗುಣವಂತ



ಚಿತ್ರ: ಮಸಣದ ಹೂವು
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯಕರು : ಎಸ್.ಜಾನಕಿ
ವರ್ಷ: ೧೯೮೪

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ದಾರಿದೀಪ ತೋರುತಾ ತೋರುತಾ
ಕರುಣೆ ಕಿರಣ ಬೀರುತಾ ಬೀರುತಾ
ಬಂದೆ ನೀನು ಓ ಸ್ನೇಹಿತ ಸ್ನೇಹಿತ
ನನ್ನ ಬಾಳು ಬೆಳಗಿದೆ ಬೆಳಗಿದೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ಹೃದಯ ನಿನಗೆ ಸೋತಿದೆ ಸೋತಿದೆ
ನುಡಿಯೇ ನಾಲಿಗೆ ನಾಚಿದೆ ನಾಚಿದೆ
ಬಗೆಬಗೆ ಭಾವ ಮೂಡಿದೆ ಮೂಡಿದೆ
ಮನವು ನಿನ್ನೇ ಹೊಗಳಿದೆ ಹೊಗಳಿದೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ಪ್ರೇಮದಾಸೆ ತೋರಲಾರೆ ತೋರಲಾರೆ
ಪ್ರಣಯ ಲೀಲೆ ಆಡಲಾರೆ ಆಡಲಾರೆ
ಭಾಷೆಯ ಮೀರಿದೆ ಭಾವನೆ ಕಾಮನೆ
ಆಸೆಯ ಮೀರಿದೆ ಮೋಹದ ಪ್ರೇರಣೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ