Showing posts with label ಪಿ.ಲಂಕೇಶ್. Show all posts
Showing posts with label ಪಿ.ಲಂಕೇಶ್. Show all posts

Saturday, October 9, 2010

ಕೆಂಪಾದವೋ ಎಲ್ಲ ಕೆಂಪಾದವೋ



ಚಿತ್ರ: ಎಲ್ಲಿಂದಲೋ ಬಂದವರು
ಸಾಹಿತ್ಯ: ಪಿ.ಲಂಕೇಶ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦

ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೊ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ


ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ
ಊರು ಕಂದಮ್ಮಗಳು ಕೆಂಪಾದವೋ
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ
ಊರು ಕಂದಮ್ಮಗಳು ಕೆಂಪಾದವೋ

ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೋ
ನನಗಾಗ ಕೆಂಪಾದವೋ
ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೋ
ನನಗಾಗ ಕೆಂಪಾದವೋ

ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ