Showing posts with label ಚಿತ್ರ. Show all posts

Friday, November 12, 2010

ಈ ಹೃದಯ ಹಾಡಿದೆ

ಚಿತ್ರ: ಸುಪ್ರಭಾತ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರ
ವರ್ಷ: ೧೯೮೮

ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ

ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ

ಗಾಳಿಯು ಬೀಸಲು ಭ್ರಮೆಯಿಂದ ಅಲೆದಾಡಿದೆ

ಹಗಲು ಇರುಳಾಗಿ ಇರುಳು ಹಗಲಾಗಿ ದಿನ ರಾತ್ರಿ ಓಡಿದೆ
ಮರೆಯುವ ರೀತಿಯ ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ ತುಳುಕಾಡಿದೆ

ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ

ಚಿಗುರು ಎಳೆಯಾಗಿ ಮೊಗ್ಗು ಹೂವಾಗಿ ಋತುಕಾಲ ಓಡಿದೆ

ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲದೆ

ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ ನದಿಯಾಗಿ ಓಡಿದೆ
ಬಯಕೆಯು ಮುಗಿಯದೆ ಸುಖ ಶಾಂತಿ ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ