Showing posts with label ಸಾಹಸ ಸಿಂಹ. Show all posts
Showing posts with label ಸಾಹಸ ಸಿಂಹ. Show all posts

Wednesday, June 1, 2011

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಚಿತ್ರ: ಸಾಹಸ ಸಿಂಹ
ಸಾಹಿತ್ಯ: ಅರ್.ಎನ್.ಜಯಗೋಪಾಲ್
ಸಂಗೀತ: ಸತ್ಯಂ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ಹೇ...ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೇ ನಾನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಕನಸಲ್ಲೂ ನಿನ್ನ ರೂಪ ಈ ಮನದಲ್ಲಿ ತರಲು ತಾಪ
ಕಣ್ಣಲ್ಲಿ ಮುಚ್ಚಿ ನಿನ್ನಾ ನಾ ಕರೆದೊಯ್ವ ಆಸೆ ಚಿನ್ನಾ
ನಗುವೆಂಬ ಬಲೆಯ ಬೀಸಿ ನಾ ನುಡಿಯಲ್ಲಿ ಜೇನಾ ಸೂಸಿ
ಸೆರೆಹಿಡಿವೆ ಬಿಡದೆ ನಿನ್ನಾ....

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಮಿಂಚಂತೆ ಸುಳಿದು ನೀನು ಮರೆಯಾಗಿ ಹೋದರೇನು
ಸುಳಿವನ್ನು ತಿಳಿಯಬಲ್ಲ ಹೊಸ ಮೋಡಿ ಬಲ್ಲೆ ನಾನು
ಬಾಳಲ್ಲಿ ಬಿಡಿಸದಂಥ ಎಂದೆಂದೂ ಮುರಿಯದಂಥ
ಬಂಧನದೇ ಹಿಡಿವೆ ನಿನ್ನ...

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ಹೇ...ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೇ ನಾನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು