Showing posts with label ಪುಟಾಣಿ ಏಜೆಂಟ್ ೧೨೩. Show all posts
Showing posts with label ಪುಟಾಣಿ ಏಜೆಂಟ್ ೧೨೩. Show all posts

Tuesday, February 1, 2011

ಏನೋ ಸಂತೋಷ ಏನೋ ಉಲ್ಲಾಸ



ಚಿತ್ರ: ಪುಟಾಣಿ ಏಜೆಂಟ್ ೧೨೩
ಸಾಹಿತ್ಯ: ಗೀತಪ್ರಿಯ
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೯

ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಜನ್ಮ ಜನ್ಮದ ಈ ಆತ್ಮ ಬಂಧನ
ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಜನ್ಮ ಜನ್ಮದ ಈ ಆತ್ಮ ಬಂಧನ

ನನ್ನಾಸೆ ನಿನ್ನಾಸೆ, ಒಂದಾಗಿ ಸೇರಿ ಏನೇನೊ ಕೋರಿ, ಉಯ್ಯಾಲೆ ತಾನಾಡಿದೆ
ನಿನ್ನಲ್ಲಿ ನನ್ನಲ್ಲಿ, ಒಲವೆಲ್ಲ ಕೂಡಿ ಗೆಲುವಿಂದ ಹಾಡಿ, ಎಲ್ಲೆಲ್ಲೊ ಓಲಾಡಿದೆ
ದಾಹವೊ ಮೋಹವೊ, ಹೂಬಳ್ಳಿಯೊಂದು, ಮರಸುತ್ತಿ ಬಂದು, ತಾ ನೀಡೆ ಆಲಿಂಗನ
ಸಂಚಿನ ಮಿಂಚಿನ, ಕಣ್ಣೆರೆಡು ಕೂಡಿ, ಮಾಡಿರಲು ಮೋಡಿ, ಮೈಯಲ್ಲಿ ಮೃದು ಕಂಪನ
ಇಂದೇಕೊ ನಮ್ಮಲ್ಲಿ ಇಂತಹ ತಲ್ಲಣ

ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಜನ್ಮ ಜನ್ಮದ ಈ ಆತ್ಮ ಬಂಧನ

ನೀನಲ್ಲಿ ನಾನಿಲ್ಲಿ, ಈ ನೋಟದಲ್ಲಿ, ಆ ನೋಟ ನಕ್ಕು, ಚೆಲ್ಲಾಟ ನೀನಾಡಿದೆ
ಹಾಡುತ ಆಡುತ, ಮನವೆಂಬ ಹಕ್ಕಿ, ಒಲವೆಲ್ಲೊ ಉಕ್ಕಿ, ಬಾನಲ್ಲಿ ಹಾರಾಡಿದೆ
ನಿನ್ನಿಂದ ನನ್ನೊಂದ, ಹೂವಲ್ಲಿ ಜೇನು, ನನ್ನಲ್ಲಿ ನೀನು, ಬಾಳೆಲ್ಲ ಹಾಯಾಗಿದೆ
ನಾವೆಂದು ಒಂದೆಂದು, ನಮ್ಮಂತರಂಗ ಆನಂದರಂಗ, ಅನುರಾಗ ತಾ ತಂದಿದೆ
ತಂಗಾಳಿ ತಂಪಾದ ಸಂದೇಶ ಸಾರಿದೆ

ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಆತ್ಮ ಬಂಧನ, ಆತ್ಮ ಬಂಧನ