Showing posts with label ಪ್ರೇಮಾನುಬಂಧ. Show all posts
Showing posts with label ಪ್ರೇಮಾನುಬಂಧ. Show all posts

Tuesday, November 2, 2010

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ

ಚಿತ್ರ: ಪ್ರೇಮಾನುಬಂಧ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ

ಹೊಸದಾಗಿ ಮೊಗ್ಗೊಂದು ಹೂವಾಗಿ
ಆ ಹೂವೇ ಈ ಹೆಣ್ಣ ಮೊಗವಾಗಿ
ಸುಳಿದಾಡೋ ಮಿಂಚಿಂದ ಕಣ್ಣಾಗಿ
ಗಿಳಿ ಮಾತು ಅವಳಾಡೋ ಮಾತಾಗಿ
ತಂಗಾಳಿಗೆ ಒಲಾಡುವ
ಹಾ ತಂಗಾಳಿಗೆ ಒಲಾಡುವ
ಲತೆಯೊಂದು ನಡುವಾಯಿತೇನೋ
ನವಿಲೊಂದು ಕುಣಿದಂತೆ ನಡೆವಾಗ ಸಂತೋಷಗೊಂಡೆ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ

ಹಗಲಲ್ಲಿ ಕಣ್ಮುಂದೆ ನೀನಿರುವೆ
ಇರುಳಲ್ಲಿ ಕನಸಲ್ಲಿ ನೀ ಬರುವೆ
ಜೊತೆಯಾಗಿ ಇರುವಾಸೆ ತಂದಿರುವೆ
ನನಗೆಂದು ಹೊಸ ಬಾಳ ನೀ ತರುವೆ
ಬಂಗಾರಿಯೇ ಸಿಂಗಾರಿಯೇ
ಹಾ ಬಂಗಾರಿಯೇ ಸಿಂಗಾರಿಯೇ
ನನ್ನೊಮ್ಮೆ ನೀ ನೋಡು ಚೆಲುವೆ
ಒಲವಿಂದ ಬಂದೀಗ ನನ್ನನ್ನು ನೀ ಸೇರು ಹೂವೇ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ