Showing posts with label ಅಶ್ವಥ್-ವೈದಿ. Show all posts
Showing posts with label ಅಶ್ವಥ್-ವೈದಿ. Show all posts

Thursday, June 2, 2011

ಎಂಥ ಮರುಳಯ್ಯಾ ಇದು ಎಂಥಾ ಮರುಳು

ಚಿತ್ರ: ಸ್ಪಂದನ
ಸಾಹಿತ್ಯ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮

ಎಂಥ ಮರುಳಯ್ಯಾ ಇದು ಎಂಥಾ ಮರುಳು
ಬೆಳಗಿನ ಹಿಮದಂತೆ ಹರಿವಾ ನೆರಳು
ಥಳಥಳ ಮಿನುಗಿ ಸೋಕಲು ಕರಗಿ
ಥಳಥಳ ಮಿನುಗಿ ಸೋಕಲು ಕರಗಿ
ಸರಿವುದು ಈ ಬಾಳಿನೆಲ್ಲಾ ತಿರುಳು ಸರಿವುದು ಈ ಬಾಳಿನೆಲ್ಲಾ ತಿರುಳು
ಎಂಥ ಮರುಳಯ್ಯಾ ಇದು ಎಂಥಾ ಮರುಳು

ಹರಿಯುವ ನೀರಿಗೆ ಯಾವ ಹೊಣೆ?
ಹಾರುವ ಹಕ್ಕಿಗೆ ಎಲ್ಲಿ ಮನೆ?
ಬಾಳಿನ ಕಡಲಿನ ತೆರೆಗಳ ಸೀಳಿ
ತಲುಪುವುದಾಚೆಯ ದಡದ ಕೊನೆ ತಲುಪುವುದಾಚೆಯ ದಡದ ಕೊನೆ
ಎಂಥ ಮರುಳಯ್ಯಾ ಇದು ಎಂಥಾ ಮರುಳು

ಸಂಜೆಯ ನೇಸರ ಬಣ್ಣದ ಲೀಲೆ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ
ಕಡಲಿಗೆ ಸಾಲಾಗಿ ಮೂಡುತ ಮುಳುಗುತ
ಬೆನ್ನಟ್ಟಿ ಸಾಗುವ ತೆರೆಗಳ ಹಾಳೆ
ಸೃಷ್ಟಿಯೆ ಸುಂದರ ಸುಳ್ಳಿನ ಮಾಲೆ ಸೃಷ್ಟಿಯೆ ಸುಂದರ ಸುಳ್ಳಿನ ಮಾಲೆ

ಎಂಥ ಮರುಳಯ್ಯಾ ಇದು ಎಂಥಾ ಮರುಳು
ಬೆಳಗಿನ ಹಿಮದಂತೆ ಹರಿವಾ ನೆರಳು
ಥಳಥಳ ಮಿನುಗಿ ಸೋಕಲು ಕರಗಿ
ಥಳಥಳ ಮಿನುಗಿ ಸೋಕಲು ಕರಗಿ
ಸರಿವುದು ಈ ಬಾಳಿನೆಲ್ಲಾ ತಿರುಳು ಸರಿವುದು ಈ ಬಾಳಿನೆಲ್ಲಾ ತಿರುಳು
ಎಂಥ ಮರುಳಯ್ಯಾ ಇದು ಎಂಥಾ ಮರುಳು

Wednesday, June 1, 2011

ಹೂವಾ ನೋಡು ಎಂಥ ಅಂದವಾಗಿದೆ

ಚಿತ್ರ : ಬಾಡದ ಹೂ
ಸಂಗೀತ : ಅಶ್ವತ್ಥ್-ವೈದಿ
ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಮತ್ತು ಕೋರಸ್
ವರ್ಷ: ೧೯೮೨

ಹೂವ ನೋಡು
ಹೂವಾ ನೋಡು ಎಂಥ ಅಂದವಾಗಿದೆ ಹೂವಾ ನೋಡು ಎಂಥ ಅಂದವಾಗಿದೆ
ಆ ಬಣ್ಣ ಬಣ್ಣ ಹೇಗೆ ನಮ್ಮ ಕಣ್ಣ ತುಂಬಿದೆ
ಆಮೇಲೆ
ತಂಗಾಳಿಯಲ್ಲಿ ಕಂಪನ್ನು ಚೆಲ್ಲಾಡಿದೆ ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ

ಬಳ್ಳೀ ನೋಡು ಬಳ್ಳಿ ನೋಡು ಎಂಥ ಅಂದವಾಗಿದೆ
ಹೌದು ಹೌದು
ಬಳ್ಳಿ ನೋಡು ಎಂಥ ಅಂದವಾಗಿದೆ ಆ ಮರವ ಹೇಗೆ ಸುತ್ತಿ ಸುತ್ತಿ ಮೇಲೆ ಬಂದಿದೆ
ಗುರು ಫೈನ್
ಈ ಪ್ರೀತಿ ಕಂಡು ಮನಸಿಂದು ಬೆರಗಾಗಿದೆ ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು

ಆಗಸವೆಲ್ಲೋ ಭೂಮಿಯು ಎಲ್ಲೋ ಯಾರು ಬಿಡಿಸದ ಅನುಬಂಧ
ಯಾರು ಬಿಡಿಸದ ಅನುಬಂಧ

ಕಡಲಿನ ನೀರನು ಹೀರಿ ಮೇಲೆ ಕೊಡುವುದು ಮಳೆಯ ಮುಗಿಲಿಂದ
ಕೊಡುವುದು ಮಳೆಯ ಮುಗಿಲಿಂದ

ಹನಿಹನಿ ನೀರು ಸೇರಿ ಸೇರಿ ಹನಿಹನಿ ನೀರು ಸೇರಿ ಸೇರಿ
ನದಿಯಾಗಿ...
ನದಿಯಾಗಿ ಹರಿದಾಗ ತಾನೇನೆ ಅಂದವೆಲ್ಲ

ಹೂವಾ ನೋಡು ಎಂಥ ಅಂದವಾಗಿದೆ ಆ ಬಣ್ಣ ಬಣ್ಣ ಹೇಗೆ ನಮ್ಮ ಕಣ್ಣ ತುಂಬಿದೆ
ತಂಗಾಳಿಯಲ್ಲಿ ಕಂಪನ್ನು ಚೆಲ್ಲಾಡಿದೆ ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ

ಮಾನವ ಜೀವಿ ಒಂಟಿಯಲ್ಲ ಸ್ನೇಹವ ಮರೆತರೆ ಹಿತವಿಲ್ಲ
ಸ್ನೇಹವ ಮರೆತರೆ ಹಿತವಿಲ್ಲ

ಸಾವಿರ ವರುಷ ಬಾಳುವುದಿಲ್ಲ ಪ್ರೀತಿಯ ಅರಿಯದೆ ಸುಖವಿಲ್ಲ
ಪ್ರೀತಿಯ ಅರಿಯದೆ ಸುಖವಿಲ್ಲ

ಸರಸದಿ ಸೇರಿ ಬಾಳಿದಾಗ ಸರಸದಿ ಸೇರಿ ಬಾಳಿದಾಗ
ಆನಂದಾ...
ಆನಂದ ನಮಗಾಗ ಈ ಮಾತು ಸುಳ್ಳಲ್ಲ

ಬಳ್ಳಿ ನೋಡು ಎಂಥ ಅಂದವಾಗಿದೆ ಆ ಮರವ ಹೇಗೆ ಸುತ್ತಿ ಸುತ್ತಿ ಮೇಲೆ ಬಂದಿದೆ
ಈ ಪ್ರೀತಿ ಕಂಡು ಮನಸಿಂದು ಬೆರಗಾಗಿದೆ ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು ಎಂಥ ಸ್ನೇಹವು ಆಹಾ ಎಂಥ ಪ್ರೇಮವು

Tuesday, December 7, 2010

ಒಲುಮೆ ಪೂಜೆಗೆಂದೇ



ಚಿತ್ರ: ಅನುಪಮ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೧

ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ...

ಮಮತೆ ಮೀಟಿ ಮಿಲನ ಕಂಡೆ ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರೆಯ ತೂಗಿ ಸನಿಹ ಬಂದೆ ಎಲ್ಲ ಪ್ರೀತಿ ಸಮ್ಮೋಹ ತಂದೆ
ಹರುಷ ತಂದೆ ಹಾದಿಯೇ ಚಂದ
ಹರುಷ ತಂದೆ ಹಾದಿಯೇ ಚಂದ ಒಲವಿನಾಸರೆ ರೋಮಾಂಚ ಬಂಧ

ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ

ಜೊತೆಯ ಸೇರಿ ಬರುವೆ ನಾನು ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೆ ನಾನು ನನಗೆ ನೀನು
ನಿನಗೆ ನಾನು ನನಗೆ ನೀನು ಪ್ರೇಮ ಜೀವನ ಎಂದೆಂದೂ ಜೇನು

ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ...
ಸಂಜೀವನ... ಸಂಜೀವನ...

Thursday, December 2, 2010

ಎಂಥಾ ಲೋಕವಯ್ಯಾ



ಚಿತ್ರ:: ನಾರದ ವಿಜಯ
ಸಾಹಿತ್ಯ : ಚಿ. ಉದಯ ಶಂಕರ್
ಸಂಗೀತ: ಅಶ್ವಥ್-ವೈದಿ
ಗಾಯಕರು: ಕೆ.ಜೆ.ಯೇಸುದಾಸ್
ವರ್ಷ: ೧೯೮೦

ಎಂಥಾ ಲೋಕವಯ್ಯಾ.. ಇದು ಎಂಥಾ ಲೋಕವಯ್ಯಾ
ಹೊಸತನವ ಕೊಡುವ ಹೊಸ ವಿಷಯ ಅರಿವ
ಹೊಸತನವ ಕೊಡುವ ಹೊಸ ವಿಷಯ ಅರಿವ

ಬಯಕೆತರುವ ಇದು ಎಂಥಾ ಲೋಕವಯ್ಯ
ಇದು ಎಂಥಾ ಲೋಕವಯ್ಯ

ಕಡಲಲ್ಲಿ ಧುಮುಕಿ ಹೋರಾಡುವಾ ಮುಗಿಲೇರಿ ಮೇಲೆ ತೇಲಾಡುವಾ
ಆ ಚಂದ್ರನೆಡೆಗೆ ಹಾರಾಡುವಾ  ಗ್ರಹತಾರೆಗಳಿಗೆ ಕೈ ಚಾಚುವಾ
ಜನರಿಂದ ತುಂಬಿ ಮೆರೆವಾ ಆ......
ಜನರಿಂದ ತುಂಬಿ ಮೆರೆವಾ

ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ

ಬಡತನದ ಜೊತೆಗೆ ಬಡಿದಾಡುವಾ ಸುಖವನ್ನು ಅರಸಿ ಅಲೆದಾಡುವಾ
ಹೊಸದನ್ನು ದಿನವು ಹುಡುಕಾಡುವಾ ಛಲವನ್ನು ಬಿಡದೆ ಸೆಣಸಾಡುವಾ
ಜನರಿಂದ ತುಂಬಿ ಮೆರೆವಾ ಆ......
ಜನರಿಂದ ತುಂಬಿ ಮೆರೆವಾ

ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ

ಆ..... .ಆ..... ಆ......  ಆ.......

Saturday, October 9, 2010

ನಮ್ಮೂರ ಮಂದಾರ ಹೂವೇ



ಚಿತ್ರ : ಆಲೆಮನೆ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೇ

ಕಣ್ಣಲ್ಲೇ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ

ಕಣ್ಣಲ್ಲೇ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ

ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ
ಸೊಗಸಾದ ಕಾರಂಜಿ ಬಿರಿದೆ

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೇ

ಒಡಲಾಳ ಮೊರೆದು ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ

ಒಡಲಾಳ ಮೊರೆದು ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ

ತೀರದ ಮೋಹದ ಇನಿದಾದ ಆನಂದ ತಂದೆ
ಇನಿದಾದ ಆನಂದ ತಂದೆ

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ಬರಿದಾದ ಮನದಲ್ಲಿ ಮಿನುಗು