Showing posts with label ಉಪಾಸನೆ. Show all posts
Showing posts with label ಉಪಾಸನೆ. Show all posts

Thursday, June 2, 2011

ಭಾವವೆಂಬ ಹೂವು ಅರಳಿ

ಚಿತ್ರ: ಉಪಾಸನೆ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ವಿಜಯಭಾಸ್ಕರ್
ಗಾಯನ : ವಾಣಿ ಜಯರಾಂ
ವರ್ಷ: ೧೯೭೪

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ಸ.ಗ.ಮ.ದ.ಗಾ.ಮಾ.ದ ಸ.ಮ.ದ.ನಿ.ಸಾ.ದ.ನಿ

ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ ಗಾನವೆ ತುಂಬಿದೆ ಈ ಜಗವೆಲ್ಲಾ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನ ನೆನೆಯುತ ಬೇಡಿ ಶಿವನಾ ಕಂಡರು ವಚನವ ಹಾಡಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ಕುಣಿಯಿತು ನಾರದನ ಗಾನದಲ್ಲಿ ತಣಿಯಿತು ಕೃಷ್ಣನ ಮುರಳಿಯಲಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ

Wednesday, June 1, 2011

ಸಂಪಿಗೆ ಮರದ ಹಸಿರೆಲೆ ನಡುವೆ

ಚಿತ್ರ: ಉಪಾಸನೆ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯಕರು : ಬಿ.ಕೆ. ಸುಮಿತ್ರಾ
ವರ್ಷ: ೧೯೭೪

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ… ಚಿಕ್ಕವ್ವ… ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್…
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ…
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ