Showing posts with label ಪ್ರೇಮದ ಕಾಣಿಕೆ. Show all posts
Showing posts with label ಪ್ರೇಮದ ಕಾಣಿಕೆ. Show all posts

Tuesday, December 21, 2010

ಬಾನಿಗೊಂದು ಎಲ್ಲೆ ಎಲ್ಲಿದೆ

ಚಿತ್ರ: ಪ್ರೇಮದ ಕಾಣಿಕೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೭೬

ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...

ಆಸೆ ಎಂಬ ಬಿಸಿಲುಗುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲೀ ವಿನೋದವಾಗಲೀ ಅದೇನೆ ಆಗಲೀ ಅವನೆ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೆ...

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆಯೇತಕೆ ನಿರಾಸೆಯೇತಕೆ ಅದೇನೇ ಬಂದರೂ ಅವನ ಕಾಣಿಕೆ

ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ನಿಧಾನಿಸು ನಿಧಾನಿಸು...