Showing posts with label ಚಿ. ಉದಯಶಂಕರ್. Show all posts
Showing posts with label ಚಿ. ಉದಯಶಂಕರ್. Show all posts

Wednesday, July 20, 2011

ಪ್ರೇಮ ಪ್ರೀತಿ ನನ್ನುಸಿರು



ಚಿತ್ರ: ಸಿಂಗಾಪುರದಲ್ಲಿ ರಾಜಾ ಕುಳ್ಳ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಜೆ. ಯೇಸುದಾಸ್
ವರ್ಷ: ೧೯೭೮

ವಾಟ್ ಈಸ್ ಲೈಫ್ ಲೈಫ್ ಈಸ್ ಎ ಸಾಂಗ್
ದೆನ್ ಸಿಂಗ್ ಇಟ್ ಐ ಸೇ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಅನ್ಯಾಯ ಕಂಡಾಗ ಸಿಡಿಗುಂಡು ಸಿಡಿದಂತೆ
ಅಪರಾಧಿ ಎಲ್ಲೆಂದು ಹುಡುಕಾಡಿ ಹುಲಿಯಂತೆ
ಹೋರಾಡುವಾ ಬಾ ಓ ಗೆಳೆಯ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು

ಹೂವಂತೆ ಮೃದುವಾಗಬಲ್ಲೆ ಮುಳ್ಳಂತೆ ಮೊನಚಾಗಬಲ್ಲೆ
ಹಣ್ಣಂತೆ ಸಿಹಿಯಾಗಬಲ್ಲೆ ವಿಷದಂತೆ ಕಹಿಯಾಗಬಲ್ಲೆ
ಬಾಳೋದು ಹೇಗೆಂದು ನಾ ಬಲ್ಲೆ ಆಳೋದು ಹೇಗೆಂದು ಬಲ್ಲೆ
ಪ್ರೀತಿ ಪ್ರೀತಿಗೆ ರೋಷ ರೋಷಕೆ ನಮ್ಮ ರೀತಿಯೆನ್ನುವಾ

ವಾಟ್ ಈಸ್ ಲೈಫ್ ಲೈಫ್ ಈಸ್ ಎ ಡ್ಯೂಟಿ
ದೆನ್ ಪರ್ಫಾರ್ಮ್ ಇಟ್ ಐ ಸೇ
ಬಾಳು ಎಂದೂ ಹೂವಲ್ಲಾ ಬಾಳು ಎಂದೂ ಮುಳ್ಳಲ್ಲಾ
ಕಾಣೋದು ನಿಜವಲ್ಲ ಮಾತೆಲ್ಲಾ ಮುತ್ತಲ್ಲ
ಕಾಲಕ್ಕೆ ತಕ್ಕಂತೆ ಜಗದಲ್ಲಿ ಜನರೆಲ್ಲ
ಬಾಳೆಂಬುವಾ ಈ ಹಾದಿಯಲಿ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು

ಸವಿಯಾದ ಮಾತಾಡಬಲ್ಲೆ ಕವಿಯಾಗಿ ನಾ ಹಾಡಬಲ್ಲೆ
ಸಂತೋಷ ನಾ ಹಂಚಬಲ್ಲೆ ನೋವೆಲ್ಲಾ ನಾ ನುಂಗಬಲ್ಲೆ
ತಂಗಾಳಿ ನಾನಾಗಿ ಬರಬಲ್ಲೆ ಬಿರುಗಾಳಿ ನಾನಾಗಬಲ್ಲೆ
ಎಲ್ಲೆ ನೀನಿರು ಹೇಗೆ ನೀನಿರು ಎಂದೂ ಸ್ನೇಹದಿಂದಿರು

ಸೋ ವಾಟ್ ಈಸ್ ಲೈಫ್ ಲೈಫ್ ಈಸ್ ಎ ಗೇಮ್
ಆಹಾ ದೆನ್ ಪ್ಲೇ ಇಟ್ ಐ ಸೇ
ಹಗಲು ಇರುಳು ಇರುವಂತೆ ಸೋಲು ಗೆಲುವು ಜೊತೆಯಂತೆ
ಉಲ್ಲಾಸ ಸಂತೋಷ ಎಂದೆಂದೂ ಇರದೆಂದು
ನೋವೊಂದೇ ಸುಖವೊಂದೇ ಬಾಳಲ್ಲಿ ಬರದೆಂದು
ಈ ಸತ್ಯವಾ ನಾ ಅರಿತಿರುವೆ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಎವೆರಿಬಡೀ…

Thursday, July 7, 2011

ಒಂದು ಮಾತು... ನನಗೆ ಗೊತ್ತು



ಚಿತ್ರ : ಕೆರಳಿದ ಸಿಂಹ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಸತ್ಯಂ
ಗಾಯನ : ಡಾ|| ರಾಜ್ ಕುಮಾರ್, ಸುಲೋಚನ
ವರ್ಷ: ೧೯೮೨

ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಈ ದಿನ ಬೇರೆ ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ

ಸಂಜೆಯ ಕೆಂಪು ಗಾಳಿಯ ತಂಪು
ಹೊಸ ಹೊಸ ಬಯಕೆ ತಂದಾಗ
ತುಂಬದ ವಿರಹ ಬಂದರೆ ಸನಿಹ
ಸಾರ್ಥಕ ನಮ್ಮ ಅನುರಾಗ
ಮೋಹದ ಮಾತನಾಡಿ
ಕಣ್ಣಲೇ ಮೋಡಿ ಮಾಡಿ
ಈಗೇಕೆ ನನ್ನಲಿ ಆಸೆಯ ತರುವೆ

ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ

ತೋಳಲಿ ಹೀಗೆ ಬಳಸಿದೆ ಏಕೆ
ಎದೆ ಜಿಲ್ ಎಂದಿದೆ ನನಗೀಗ
ಮೈಯಲಿ ಮಿಂಚು ತುಂಬುವ ಸಂಚು
ಮಾಡುವೆ ಏಕೆ ನೀನೀಗ
ಯಾರೂ ಇಲ್ಲದಾಗ ಆಸೆಯು ಮೂಡಿದಾಗ
ಈ ಬಿಂಕ ಬಿಗುಮಾನ ನಿನಗೇತಕೆ

ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಈ ದಿನ ಬೇರೆ ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ

ಹಾಯಾಗಿ ಕುಳಿತಿರು ನೀನು



ಚಿತ್ರ: ಹಾಲು ಜೇನು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್ ಕುಮಾರ್, ಸರಿತಾ
ವರ್ಷ: ೧೯೮೨

ಲೇ ಲೇ..
ಏನ್ರೀ..
ಒಂದ್ ಮಾತು
ಹೇಳಿ
ಹೇಳಿದ್ರೆ ಕೇಳ್ತೀಯಾ?
ನಿಮ್ ಮಾತ್ ಯಾವತ್ ಕೇಳಿಲ್ಲ?
ಹಾಗಾದ್ರೆ, ಆ ಪಾತ್ರೆ ಅಲ್ಲಿಡು
ಹೂಂ.. ಇಟ್ಟೆ
ಬಾ ಇಲ್ಲಿ
ಹೂಂ?
ಬಾರೆ ಅಂದ್ರೆ
ಹೂಂ..
ಕೂತ್ಕೋ ಇಲ್ಲಿ ಮಂಚದ್ ಮೇಲೆ
ಏನ್ರೀ ಇದು ಇಷ್ಟೊತ್‍ನಲ್ಲಿ
ಅಯ್ಯಯ್ಯೋ! ಅದಕ್ಕಲ್ವೇ..

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ
ಮನೆ ಕೆಲ್ಸ ಯಾರ್ರೀ ಮಾಡೋದು ನಿಮ್ಮಾವನ?
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ

ಅಯ್ಯಯ್ಯೋ ಏನ್ರೀ ಇದು ಅವತಾರ?
ಗಂಡ್ಸಾಗ್ ಹುಟ್ಟಿ ನೀವ್ ಅಡುಗೆ ಮಾಡ್ತೀರ?

ಭೀಮಸೇನ ನಳಮಹರಾಜರು ಗಂಡಸರಲ್ಲವೇ
ಭೀಮಸೇನ ನಳಮಹರಾಜರು ಗಂಡಸರಲ್ಲವೇ
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ ಮಹನೀಯರಲ್ಲವೇ
ನೆನ್ನೆಯ ತನಕ ನೀನೆ ದುಡಿದೆ ಈ ಸಂಸಾರಕೆ ಜೀವ ತೇದೆ
ಈ ದಿನವಾದರೂ ನಿನ್ನ ಸೇವೆಯ ಮಾಡುವೆ ಚಿನ್ನ
ಪಬಬಂ ಪಬಬಂ ಪಬಬಂ

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ತರರಂ ತರರಂ ತರರಂ

ಯಾ..ಯಾಕ್ರೀ ಕಣ್ಣೀರು
ಇದು ಕಣ್ಣೀರಲ್ವೇ ಪನ್ನೀರು ಪನ್ನೀರು
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ?
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ?
ಮನಸನು ಅರಿತು ನಡೆಯುತಲಿರಲು ಚಿಂತೆಯ ಮಾತೇಕೆ
ನೀ ನಗುತಲಿರಲು ನಮ್ಮೀ ಮನೆಗೆ ಆ ಸ್ವರ್ಗವೇ ಜಾರಿದಂತೆ
ಹೆಂಡತಿ ಸೇವಕಿ ಅಲ್ಲ ಗಂಡನು ದೇವರು ಅಲ್ಲ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ

ಜಯಸಿಂಹ ಬಂದ ಜಯಸಿಂಹ



ಚಿತ್ರ: ಜಯಸಿಂಹ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಾನಂದ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೭

ತಣ್ಣನೆ ಗಾಳಿ ಕಾಡೆಲ್ಲ ಅಲೆದು
ಅರಗಿಳಿಗಳ ನೋಡಿ ಸವಿನುಡಿಯಲಿ ಹಾಡಿದೆ
ಸವಿನುಡಿಯಲಿ ಹಾಡಿದೆ
ಜಯಸಿಂಹ ಬಂದ ಜಯಸಿಂಹ
ಜಯಸಿಂಹ ಬಂದ ಜಯಸಿಂಹ

ಇನ್ನೇಕೆ ಭೀತಿ ಭಯವಿಲ್ಲ ನಿಮಗೆ
ವನಮೃಗಗಳು ಕ್ಷೇಮ ಗಿಡಮರಗಳು ಕ್ಷೇಮ
ಗಿಡಮರಗಳು ಕ್ಷೇಮ
ಜಯಸಿಂಹ ಬಂದ ಜಯಸಿಂಹ
ಜಯಸಿಂಹ ಬಂದ ಜಯಸಿಂಹ

ಗಿಳಿಗಳ ಗುಂಪು ಕಾಡೆಲ್ಲ ಅಲೆದು
ವನಮೃಗಗಳ ನೋಡಿ ಸವಿನುಡಿಯಲಿ ಹಾಡಿವೆ
ಸವಿನುಡಿಯಲಿ ಹಾಡಿವೆ
ಜಯಸಿಂಹ ಬಂದ ಜಯಸಿಂಹ
ಜಯಸಿಂಹ ಬಂದ ಜಯಸಿಂಹ

Monday, June 6, 2011

ಅರಳಿದೆ ತನು ಮನ ನೋಡುತ ನಿನ್ನ



ಚಿತ್ರ: ಅಪೂರ್ವ ಸಂಗಮ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಡಾ|| ರಾಜ್ ಕುಮಾರ್, ಎಸ್.ಜಾನಕಿ
ವರ್ಷ: ೧೯೮೪

ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
ಅರಳಿದೆ ತನು ಮನ ನೋಡುತ ನಿನ್ನ

ಚಲಿಸುವ ತಂಗಾಳಿಯು ಚೆಲುವೆ ನಿನ್ನ ನೋಡಿ
ನಲಿಯುತ ಓಡಿದೆ ಮುಂಗುರುಳ ಹಿಡಿದು ಆಡಿ
ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ ಈ ನಿನ್ನ ಅಂದ ನೋಡಿ
ಸುಖ ತರುತಿದೆ ಹಿತ ಕರೆದಿದೆ ಚಲುವ
ಅರಳಿದೆ ತನು ಮನ ನೋಡುತ ನಿನ್ನ

ಎದೆಯಲಿ ಹೊಮ್ಮಿ ಹೊಮ್ಮಿ ನೂರು ಬಯಕೆ ಈಗ
ಕೆಣಕಲು ಸೋತೆನು ನನ್ನಿನಿಯ ನಿನ್ನ ನೋಡಿ
ಪ್ರಣಯದ ಸಂಗೀತದ ಇಂಪು ಕಿವಿಯ ತುಂಬಿ
ಕನಸನು ಕಂಡೆನು ಸಂಗಾತಿಯೇ ನಿನ್ನ ಸೇರಿ
ಇನ್ನು ಬಿಡುವೆನೇ ನನ್ನೇ ಕೊಡುವೆ ನಾ ಚೆಲುವೆ

ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ

ಕನ್ನಡ ನಾಡಿನ ವೀರರಮಣಿಯ



ಚಿತ್ರ: ನಾಗರಹಾವು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಪಿ. ಬಿ. ಶ್ರೀನಿವಾಸ್
ವರ್ಷ: ೧೯೭೨

ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿದ ಸಿರಿನಾಡು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ವೀರಮದಕರಿ ಆಳುತಲಿರಲು ಹೈದಾರಾಲಿಯು ಯುಧ್ಧಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ಧಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಗೂಢಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ ಬರುವುದನ್ನು ಕಂಡಳು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿಯ ಸಿರಿನಾಡು
ಅಮರಳಾದಳು ಓಬವ್ವ ಅಮರಳಾದಳು ಓಬವ್ವ

ಚಂದಿರ ತಂದ ಹುಣ್ಣಿಮೆ ರಾತ್ರಿ



ಚಿತ್ರ: ಚಲಿಸುವ ಮೋಡಗಳು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯಕರು : ಡಾ|| ರಾಜ್ ಕುಮಾರ್, ಎಸ್. ಜಾನಕಿ
ವರ್ಷ: ೧೯೮೨

ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಆ ದಿಂಬು ಹಾಸಿಗೆ ನನ್ನ ನೂಕಿತು
ಈ ನನ್ನ ನಲ್ಲನ ತೂಗೆಂದಿತು
ಆ ದಿಂಬು ಹಾಸಿಗೆ ನನ್ನ ನೂಕಿತು ಈ ನನ್ನ ನಲ್ಲನ ತೂಗೆಂದಿತು
ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಈ‌ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು
ಈ‌ ನನ್ನ ಮಂಚವು ಮಾತಾಡಿತು ನಿನ್ನನ್ನು ಆಚೆಗೆ ನೂಕೆಂದಿತು

ಏನು ತೊಂದರೆ ಅಲ್ಲಿ ಬಂದರೆ ಸೇವೆ ಮಾಡುವೆನು
ಹೂವನು ಹಾಸಿ ನಿಮ್ಮ ಮಲಗಿಸಿ ಲಾಲಿ ಹಾಡುವೆನು
ಮೈಯ್ಯ ಮುಟ್ಟದೆ ಕೈಯ ಎಳೆಯದೆ ದೂರ ನಿಲ್ಲುವೆಯ
ನನ್ನ ನೆಮ್ಮದಿ ಹಾಳು ಮಾಡದೆ ಹೊರಗೆ ಹೋಗುವೆಯ
ಭಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ ಹೆಣ್ಣೇ ನಿನ್ನ ಆರೋಗ್ಯ ಸರಿಯಾಗಿಲ್ಲ
ಪ್ರೀತಿಯೆಂದರೆ ಗೊತ್ತೆ ಇಲ್ಲ ನನಗೆ ಪ್ರೀತಿಯೆ ಬೇಕಾಗಿಲ್ಲ
ಬೇಡವೆಂದರು ನಾ ಬಿಡುವುದಿಲ್ಲ

ಅಯ್ಯೊ .. ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಈ‌ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು
ಆ ದಿಂಬು ಹಾಸಿಗೆ ನನ್ನ ನೂಕಿತು ಈ ನನ್ನ ನಲ್ಲನ ತೂಗೆಂದಿತು

ಅತ್ತೆ ಕಂಡರೆ ಮಾವ ಬಂದರೆ ಮಾನ ಹೋಗುವುದು
ಅಪ್ಪನು ರೇಗಿ ಗದರಿಸಿದಾಗ ಎನು ಹೇಳುವುದು
ಏಕೆ ಹೆದರುವೆ ಕದವ ಹಾಕುವೆ ಏನೂ ಕೇಳಿಸದು
ಸದ್ದು ಮಾಡದೆ ದೀಪ ಆರಿಸು ಏನೂ ಕಾಣಿಸದು
ಅಯ್ಯೋ ನಿನ್ನಾ ನಿನ್ನ ಹೆಣ್ಣು ಆಂದೋರಿಗೆ ಬುದ್ಧಿ ಇಲ್ಲ ಏನೇ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಕೋಪ ಬಂದರೆ ಸುಮ್ಮನಿರಲ್ಲ ಆಗಲೇ ನೀನು ಚೆನ್ನ ನಲ್ಲ
ಅಯ್ಯೋ ಎನು ಮಾಡಲಿ ಆ ದೇವರೆ ಬಲ್ಲ

ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಆ ದಿಂಬು ಹಾಸಿಗೆ ನನ್ನ ನೂಕಿತು
ಈ ನನ್ನ ನಲ್ಲನ ತೂಗೆಂದಿತು
ಈ‌ ನನ್ನ ಮಂಚವು ಎನೆಂದಿತು ನಿನ್ನನ್ನು ಆಚೆಗೆ ನೂಕೆಂದಿತು

Friday, June 3, 2011

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಚಿತ್ರ: ಬೆಂಕಿಯ ಬಲೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೩

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಹರುಷ ಹರುಷ ಎಲ್ಲೆಲ್ಲೂ ಜೊತೆಗೆ ನೀನಿರೆ
ಸರಸ ಸರಸ ಬಾಳೆಲ್ಲ ಸನಿಹ ನೀನಿರೆ
ನಿನ್ನ ಮಾತಿಗೆ ನಿನ್ನ ಪ್ರೇಮಕೆ ನಾ ಸೋತು ಹೋದೆನು
ನಿನ್ನ ಸ್ನೇಹಕೆ ನಿನ್ನ ಪ್ರೀತಿಗೆ ಮಂಕಾಗಿ ಹೋದೆನು
ನನ್ನನ್ನೇ ಮರೆತೆನು

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಚೆಲುವ ನಿನ್ನ ನುಡಿ ಕೇಳಿ ಗಿಳಿಯು ನಾಚಿತು
ಚೆಲುವೆ ನಿನ್ನ ನಡೆ ನೋಡಿ ನವಿಲು ಕುಣಿಯಿತು
ನಗುನಗುತ ನೀ ಬರಲು ಹೊಸ ಆಸೆ ಚಿಮ್ಮಿತು
ನಿನ್ನ ಕಣ್ಣ ಮಿಂಚು ಮೂಡಲು ಮನವೇಕೋ ಬೆಚ್ಚಿತು
ಜಗವನ್ನೇ ಮರೆಸಿತು

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ನಿನ್ನ ನುಡಿಯು ಹಾಡಂತೆ

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ

ಚಿತ್ರ: ಒಲವು ಗೆಲವು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಎಸ್. ಜಾನಕಿ
ವರ್ಷ: ೧೯೭೭

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ
ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

ಏಕೋ ಏನೋ ಕಾಣೆ ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ ಹೊನಲು ಹರಿಯಲು
ಏಕೋ ಏನೋ ಕಾಣೆ ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ ಹೊನಲು ಹರಿಯಲು
ಕಾಣುತ ನಿನ್ನ೦ದ ಕಾಣದ ಆನ೦ದ
ಹೊಸ ಹೊಸ ಬಯಕೆಯು ನಿನ್ನಿ೦ದ

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

ತಾಳು ತಾಳು ನಲ್ಲ ನಿಲ್ಲು ತಾಳು ತಾಳು ನಲ್ಲ ನಾನು
ಬರುವೆನು ನಿನ್ನೊಡನೆ ಕಾಡುವೆ ನನ್ನೇಕೆ ಹೀಗೆ ಸುಮ್ಮನೆ

ತಾಳು ತಾಳು ನಲ್ಲ ನಾನು
ಬರುವೆನು ನಿನ್ನೊಡನೆ ಕಾಡುವೆ ನನ್ನೇಕೆ ಹೀಗೆ ಸುಮ್ಮನೆ

ಕಾಣದೆ ನಿನ್ನನ್ನು ಬಾಳೆನು ನಾನಿನ್ನು
ತಾಳೆನು ವಿರಹದ ನೋವನ್ನು

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

Thursday, June 2, 2011

ಭಾವವೆಂಬ ಹೂವು ಅರಳಿ

ಚಿತ್ರ: ಉಪಾಸನೆ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ವಿಜಯಭಾಸ್ಕರ್
ಗಾಯನ : ವಾಣಿ ಜಯರಾಂ
ವರ್ಷ: ೧೯೭೪

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ಸ.ಗ.ಮ.ದ.ಗಾ.ಮಾ.ದ ಸ.ಮ.ದ.ನಿ.ಸಾ.ದ.ನಿ

ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ ಗಾನವೆ ತುಂಬಿದೆ ಈ ಜಗವೆಲ್ಲಾ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನ ನೆನೆಯುತ ಬೇಡಿ ಶಿವನಾ ಕಂಡರು ವಚನವ ಹಾಡಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ಕುಣಿಯಿತು ನಾರದನ ಗಾನದಲ್ಲಿ ತಣಿಯಿತು ಕೃಷ್ಣನ ಮುರಳಿಯಲಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ

ಈ ಗುಲಾಬಿಯು ನಿನಗಾಗಿ

ಚಿತ್ರ: ಮುಳ್ಳಿನ ಗುಲಾಬಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨

ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ನನ್ನೀ ಕಣ್ಣಲಿ ಕಾತರವೇನು ನಿನ್ನನು ಕಾಣುವ ಆತುರವೇನು
ನನ್ನೀ ಕಣ್ಣಲಿ ಕಾತರವೇನು ನಿನ್ನನು ಕಾಣುವ ಆತುರವೇನು
ಆತುರ ತರುವ ವೇದನೆ ಏನು
ಆತುರ ತರುವ ವೇದನೆ ಏನು ಜೀವದ ಜೀವವು ಪ್ರಿಯತಮೆ ನೀನು

ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು
ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು
ಕಾಣದೆ ಹೋದರೆ ಅರೆಕ್ಷಣ ನಿನ್ನ
ಕಾಣದೆ ಹೋದರೆ ಅರೆಕ್ಷಣ ನಿನ್ನ ಮರುಕ್ಷಣ ಪ್ರಿಯತಮೆ ನನ್ನ ಸಾವು

ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ಜೊತೆಯಾಗಿ ಹಿತವಾಗಿ

ಚಿತ್ರ: ರಥಸಪ್ತಮಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೬

ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ...

ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....

ಆ ಬಾನ ನೆರಳಲ್ಲಿ ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ

ಈ ಸಂಜೆ ರಂಗಲ್ಲಿ ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ ಮಾತೊಂದ ನುಡಿವಾ

ನೀನೆ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ
ನೀನೆ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ

ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ

ಕನಸಲ್ಲಿ ಕಂಡಾಸೆ ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ ನನ್ನಾಣೆ ನಲ್ಲ

ಹಗಲಲ್ಲಿ ಕಂಡಾಸೆ ಇರುಳಲ್ಲಿ ಬಂದಾಸೆ
ಎಲ್ಲಾವೂ ಒಂದೇನೆ ನಿನ್ನೊಡನೆ ಇರುವಾಸೆ
ಬೇರೇನು ನಾ ಕೇಳೆ ನನ್ನಾಣೆ ನಲ್ಲೆ

ಎಂದೂ ಹೀಗೆ ಇರುವ ನಾವು ಎಂದೂ ಹೀಗೆ ನಲಿವ
ಎಂದೂ ಹೀಗೆ ಇರುವ ನಾವು ಎಂದೂ ಹೀಗೆ ನಲಿವ
ನಿನ್ನ ಬಿಡಲಾರೆ ನಾನೆಂದಿಗೂ

ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ

ಈ ಮೌನವಾ ತಾಳೆನು

ಚಿತ್ರ: ಮಯೂರ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್‍ಕುಮಾರ್, ಎಸ್. ಜಾನಕಿ
ವರ್ಷ: ೧೯೭೫

ಈ ಮೌನವಾ ತಾಳೆನು
ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು
ಓ ರಾಜಾ..ಈ ಮೌನವಾ ತಾಳೆನು
ನೀ ಹೇಳದೇ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ...ನೀ ಹೇಳದೇ ಬಲ್ಲೆನು

ನಾನಂದು ನಿನ್ನ ಕಂಡಾಗ ಚಿನ್ನ ಏನೇನೋ ಹೊಸ ಭಾವನೆ
ಹೂವಾಗಿ ಮನಸು ಏನೇನೋ ಕನಸು ನಾ ಕಾಣದ ಕಲ್ಪನೆ
ಇನ್ನು ನಿನ್ನ ಬಿಡೆನು ಈ ದೂರ ಸಹಿಸೆನು
ನೀ ಹೇಳದೇ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ...ನೀ ಹೇಳದೇ ಬಲ್ಲೆನು

ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಅಂದೇ ನಿನಗೆ ಸೋತೆ ನಾ ಜಗವನೆ ಮರೆತೆ

ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು
ಓ ರಾಜಾ..ಓ ರಾಣಿ...ಓ ರಾಜಾ..ಓ ರಾಣಿ.

Wednesday, June 1, 2011

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ

ಚಿತ್ರ: ಭಾಗ್ಯವಂತ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಪೂರ್ಣಚಂದ್ರ
ವರ್ಷ: ೧೯೮೧


ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ನೀನಾಡೋ ಮಾತೆಲ್ಲಾ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ
ನೀನಾಡೋ ಮಾತೆಲ್ಲಾ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ
ನೀನೊಂದು ಸಕ್ಕರೆಯ ಬೊಂಬೆಯಂತೆ ಮಗುವೆ ನೀ ನನ್ನ ಪ್ರಾಣದಂತೆ
ನನ್ನ ಪ್ರಾಣದಂತೆ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ಆ ದೇವ ನಮಗಾಗಿ ತಂದ ಸಿರಿಯೇ, ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಆ ದೇವ ನಮಗಾಗಿ ತಂದ ಸಿರಿಯೇ, ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಅಳಲೇನು ಚಂದ ನನ್ನ ಪುಟ್ಟ ದೊರೆಯೇ ಹಾಯಾಗಿ ಮಲಗು ಜಾಣ ಮರಿಯೇ
ನನ್ನ ಜಾಣ ಮರಿಯೇ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ಮಾತು ಒಂದು ಮಾತು

ಚಿತ್ರ: ಮುನಿಯನ ಮಾದರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಸುಲೋಚನ
ವರ್ಷ: ೧೯೮೧

ಮಾತು ಒಂದು ಮಾತು ಮಾತು ಒಂದು ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು

ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು

ಮಾತು ಕಿವಿ ಮಾತು ಮಾತು ಸವಿ ಮಾತು

ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹಗಲಿನಲ್ಲೂ ನೂರು ಕನಸು ಕಾಣುವ ಸುಖದ ಮಾತು

ನಿನ್ನ ತಣಿಸುವ ಇನಿ ಮಾತು ಕಣ್ಣ ಕುಣಿಸುವ ಗಿಳಿ ಮಾತು
ಮದನನನ್ನು ಕಂಡ ರತಿಯು ಮೋಹಿಸಿ ಅಂದ ಮಾತು
ಆಡುವ ಆಸೆ ಬಂತು

ಆಹಾ ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು ಮಾತು ಸವಿ ಮಾತು

ಪ್ರೇಮಿ ಆಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಪ್ರೇಮಿ ಆಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಒಲವಿನಿಂದ ಸೇರಿದಾಗ ಆಡುವ ಕಣ್ಣ ಮಾತು

ಎಂದು ಕೇಳದ ಹೊಸ ಮಾತು ಎಲ್ಲ ರಸಿಕರ ಮನೆ ಮಾತು
ಪ್ರಣಯ ಕಾವ್ಯ ಹರುಷದಿಂದ ಹಾಡಿದ ಕವಿಯ ಮಾತು
ಆಡುವ ಆಸೆ ಬಂತು

ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು ಮಾತು ಸವಿ ಮಾತು

ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ

ಚಿತ್ರ: ಮರೆಯಲಾಗದ ಕಥೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮಣಿ
ವರ್ಷ: ೧೯೮೨

ಬರೆಯುವೆ ನಿನಗಾಗಿ
ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ
ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ

ಹುಣ್ಣಿಮೆಯ ದೀಪದಲ್ಲಿ ತಣ್ಣನೆಯ ರಾತ್ರಿಯಲ್ಲಿ
ಸಂಪಿಗೆಯ ತಂಪಿನಲ್ಲಿ ಇಂಪಾದ ರಾಗದಲಿ
ನಾ ಬರೆಯುವೆ
ಅರಗಿಣಿಯ ಭಾಷೆಯಲ್ಲಿ ಕೋಗಿಲೆಯ ರಾಗದಲ್ಲಿ
ಹಂಸನಡೆ ತಾಳದಲ್ಲಿ ಮುತ್ತಂಥ ಮಾತಿನಲಿ
ಹೊಸ ಕವಿತೆಯ.. ಓ ಗೆಳತಿ...

ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ

ಹೂ ಬನದಿ ಆಯ್ದು ತಂದ ಮೊಗ್ಗಾದ ಮಲ್ಲಿಗೆಯಿಂದ
ಸವಿಜೇನ ಹನಿಹನಿಯಿಂದ ಪ್ರಣಯದ ಆನಂದದಿಂದ
ನಾ ಬರೆಯುವೆ
ನನ್ನಂತರಾಳದಿಂದ ಪುಟಿದೇಳೋ ಭಾವದಿಂದ
ಬಯಕೆಗಳ ಭಾರದಿಂದ ಕಣ್ಣುಗಳ ಮಿಂಚಿನಿಂದ
ಹೊಸ ಕವಿತೆಯ.. ಓ ಗೆಳತಿ...

ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ

ಹೂವಾ ನೋಡು ಎಂಥ ಅಂದವಾಗಿದೆ

ಚಿತ್ರ : ಬಾಡದ ಹೂ
ಸಂಗೀತ : ಅಶ್ವತ್ಥ್-ವೈದಿ
ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಮತ್ತು ಕೋರಸ್
ವರ್ಷ: ೧೯೮೨

ಹೂವ ನೋಡು
ಹೂವಾ ನೋಡು ಎಂಥ ಅಂದವಾಗಿದೆ ಹೂವಾ ನೋಡು ಎಂಥ ಅಂದವಾಗಿದೆ
ಆ ಬಣ್ಣ ಬಣ್ಣ ಹೇಗೆ ನಮ್ಮ ಕಣ್ಣ ತುಂಬಿದೆ
ಆಮೇಲೆ
ತಂಗಾಳಿಯಲ್ಲಿ ಕಂಪನ್ನು ಚೆಲ್ಲಾಡಿದೆ ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ

ಬಳ್ಳೀ ನೋಡು ಬಳ್ಳಿ ನೋಡು ಎಂಥ ಅಂದವಾಗಿದೆ
ಹೌದು ಹೌದು
ಬಳ್ಳಿ ನೋಡು ಎಂಥ ಅಂದವಾಗಿದೆ ಆ ಮರವ ಹೇಗೆ ಸುತ್ತಿ ಸುತ್ತಿ ಮೇಲೆ ಬಂದಿದೆ
ಗುರು ಫೈನ್
ಈ ಪ್ರೀತಿ ಕಂಡು ಮನಸಿಂದು ಬೆರಗಾಗಿದೆ ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು

ಆಗಸವೆಲ್ಲೋ ಭೂಮಿಯು ಎಲ್ಲೋ ಯಾರು ಬಿಡಿಸದ ಅನುಬಂಧ
ಯಾರು ಬಿಡಿಸದ ಅನುಬಂಧ

ಕಡಲಿನ ನೀರನು ಹೀರಿ ಮೇಲೆ ಕೊಡುವುದು ಮಳೆಯ ಮುಗಿಲಿಂದ
ಕೊಡುವುದು ಮಳೆಯ ಮುಗಿಲಿಂದ

ಹನಿಹನಿ ನೀರು ಸೇರಿ ಸೇರಿ ಹನಿಹನಿ ನೀರು ಸೇರಿ ಸೇರಿ
ನದಿಯಾಗಿ...
ನದಿಯಾಗಿ ಹರಿದಾಗ ತಾನೇನೆ ಅಂದವೆಲ್ಲ

ಹೂವಾ ನೋಡು ಎಂಥ ಅಂದವಾಗಿದೆ ಆ ಬಣ್ಣ ಬಣ್ಣ ಹೇಗೆ ನಮ್ಮ ಕಣ್ಣ ತುಂಬಿದೆ
ತಂಗಾಳಿಯಲ್ಲಿ ಕಂಪನ್ನು ಚೆಲ್ಲಾಡಿದೆ ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ

ಮಾನವ ಜೀವಿ ಒಂಟಿಯಲ್ಲ ಸ್ನೇಹವ ಮರೆತರೆ ಹಿತವಿಲ್ಲ
ಸ್ನೇಹವ ಮರೆತರೆ ಹಿತವಿಲ್ಲ

ಸಾವಿರ ವರುಷ ಬಾಳುವುದಿಲ್ಲ ಪ್ರೀತಿಯ ಅರಿಯದೆ ಸುಖವಿಲ್ಲ
ಪ್ರೀತಿಯ ಅರಿಯದೆ ಸುಖವಿಲ್ಲ

ಸರಸದಿ ಸೇರಿ ಬಾಳಿದಾಗ ಸರಸದಿ ಸೇರಿ ಬಾಳಿದಾಗ
ಆನಂದಾ...
ಆನಂದ ನಮಗಾಗ ಈ ಮಾತು ಸುಳ್ಳಲ್ಲ

ಬಳ್ಳಿ ನೋಡು ಎಂಥ ಅಂದವಾಗಿದೆ ಆ ಮರವ ಹೇಗೆ ಸುತ್ತಿ ಸುತ್ತಿ ಮೇಲೆ ಬಂದಿದೆ
ಈ ಪ್ರೀತಿ ಕಂಡು ಮನಸಿಂದು ಬೆರಗಾಗಿದೆ ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು ಎಂಥ ಸ್ನೇಹವು ಆಹಾ ಎಂಥ ಪ್ರೇಮವು

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ಚಿತ್ರ: ತಾಯಿಯ ಹೊಣೆ
ಸಂಗೀತ: ಸತ್ಯಂ
ಸಾಹಿತ್ಯ: ಚಿ.ಉದಯಶಂಕರ್
ಗಾಯಕರು: ರಾಜ್ ಕುಮಾರ್ ಭಾರತಿ, ಪಿ. ಸುಶೀಲಾ
ವರ್ಷ: ೧೯೮೫

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ
ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ
ನಿನ್ನಾ ಸ್ನೇಹ ನಿನ್ನಾ ಪ್ರೇಮ ಕನಸಿನಾ ಸಿರಿಯೋ ಓ ಕನಸಿನಾ ಸಿರಿಯೋ
ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ಅರಳಿದ ತಾವರೆ ಹೂವಿನ ಹಾಗೆ ಚೆಲುವೆಯಾ ಮೊಗವು
ಚಂದ್ರನ ಕಂಡಾ ನೈದಿಲೆಯಂತೆ ನಿನ್ನ ಈ ನಗುವು
ಕಾಮಿನಿ ಅರಗಿಣಿ
ನಿನ್ನ ನುಡಿಗಳು ವೀಣೆ ಸ್ವರಗಳು ಅರಿಯದೆ ಹೋದೆ ಗೆಳತಿ ಬೆರಗಾದೆ

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ತಣ್ಣನೆ ಗಾಳಿ ಸೋಕಿದ ಹಾಗೆ ಸುಖವನು ಕಂಡೆ
ಬಿಸಿಲಲಿ ಕರಗೋ ಮಂಜಿನ ಹಾಗೆ ಕಾಣದೇ ಹೋದೆ
ಪ್ರೇಮವೇ ತಾಳೆನೇ
ಮರೆಯಲಾರದೆ ದಾರಿ ಕಾಣದೆ ನಾನು ನೊಂದಿರುವೆ
ನಲ್ಲ ಎಲ್ಲಿರುವೇ

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ
ನಿನ್ನಾ ಸ್ನೇಹ ನಿನ್ನಾ ಪ್ರೇಮ ಕನಸಿನಾ ಸಿರಿಯೋ ಓ ಕನಸಿನಾ ಸಿರಿಯೋ
ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

Wednesday, March 9, 2011

ಭಾಗ್ಯಾದ ಲಕ್ಷ್ಮೀ ಬಾರಮ್ಮ



ಚಿತ್ರ: ಭಾಗ್ಯದ ಲಕ್ಷ್ಮೀ ಬಾರಮ್ಮ
ರಚನೆ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೬

ಭಾಗ್ಯಾದ ಲಕ್ಷ್ಮೀ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ಉಸಿರನ್ನಾಡಲು ಪ್ರಾಣವು ಬೇಕು ಪ್ರಾಣವು ನಿಲ್ಲಲು ಊಟವು ಬೇಕು
ಊಟವ ಮಾಡಲು ಹಣವಿರಬೇಕು ಎಲ್ಲಕು ಲಕ್ಷ್ಮಿಯ ದಯೆ ಇರಬೇಕು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಜೇಬಿನ ತುಂಬ ಇದ್ದರೆ ನೋಟು ಸುಲಭದಿ ಸಿಗುವುದು ಕಾಲೇಜು ಸೀಟು
ದೊರಕದ ವೋಟಿನ ಬೇಟೆಗೆ ಕೂಡ ಇರಲೇಬೇಕು ಬಗೆ ಬಗೆ ನೋಟು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಕಾಸು ಬಿಚ್ಚಿದರೆ ಶೀಘ್ರ ದರುಶನ ಕಾಸಿಲ್ಲದಿರೆ ಧರ್ಮ ದರುಶನ
ಈ ಕಲಿಯುಗದಲಿ ಎಲ್ಲೇ ಹೋಗಲಿ ದೇವರು ಕೂಡ ನೋಡನು ಬಡವನ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ದೊರಕದ ಲೈಸೆನ್ಸ್ ದೊರಕುವುದುಂಟು ದೊರಕದ ವಸ್ತುವು ದೊರಕುವುದುಂಟು
ಟೇಬಲ್ ಕೆಳಗಡೆ ನೋಟು ತಳ್ಳಿದರೆ ಎಲ್ಲ ಕೆಲಸಕು ಸ್ಯಾಂಕ್ಷನ್ ಉಂಟು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ವೈದ್ಯರ ಆಸೆ ಬಡವನಿಗೇಕೆ ರೋಗವು ಬಂದರೆ ಅಳುವುದು ಏಕೆ
ಧರ್ಮಾಸ್ಪತ್ರೆಗೆ ಹೋದರು ರೋಗಿಯು ಲಂಚ ಲಂಚ ಎಂದರೆ ಮಂಚ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಕೆಲಸ ದೊರಕಲು ಹಣ ಕೊಡಬೇಕು ತಾಳಿಯ ಕಟ್ಟಲು ಕೂಲಿಯು ಬೇಕು
ಸಾಧು ಸನ್ಯಾಸಿಗಳಾದರೆ ಏನು ಪಾದ ಪೂಜೆಗೂ ನೋಟಿರಬೇಕು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಗೌರವ ಧನವಿದು ಎಂದರೂ ಒಂದೇ ಮೆಚ್ಚಿಗೆಗಾಗಿ ಎಂದರೂ ಒಂದೇ
ವಿಶ್ವಾಸಕೆ ಕಿರುಗಾಣಿಕೆ ಎಂದರೂ ಎಲ್ಲಾ ಒಂದೇ ಲಂಚದ ಕಂತೆ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಝಣ ಝಣ ಎಂದು ಸದ್ದನು ಮಾಡು ಹೆಣವೂ ಬಾಯ್ ಬಾಯ್ ಬಿಡುವುದು ನೋಡು
ಹಣವಿದ್ದರೆ ನೀ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಇಲ್ಲದ ಬುಧ್ದಿಯ ಇದೆ ಎನ್ನುವರು ಇಲ್ಲದ ಅಂದವ ಇದೆ ಎನ್ನುವರು
ಒಲ್ಲದೆ ಹೋದರೂ ಓಲೈಸುವರು ಬಲ್ಲಿದನಾದರೆ ಪಾದ ಹಿಡಿವರು
ಭಾಗ್ಯಾದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮೀ ಬಾರಮ್ಮ

ನನ್ನೆದೆ ವೀಣೆಯು ಮಿಡಿಯುವುದು



ಚಿತ್ರ: ಕಥಾನಾಯಕ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ,. ವಾಣಿ ಜಯರಾಂ
ವರ್ಷ: ೧೯೮೬

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು.....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಎಂದೂ ಕಾಣೆ ನಂಬು ಜಾಣೆ ನಿನ್ನಾ ಸೇರಲು
ನೂರೂ ಮಾತು ನೂರೂ ಕವಿತೆ ಕಣ್ಣೇ ಆಡಲು
ನಿನ್ನಾ ನೋಟ ನಿನ್ನಾ ಆಟ ನನ್ನಾ ಸೆಳೆಯಲು
ಒಂಟಿ ಬಾಳು ಸಾಕು ಎಂದು ಮನಸೂ ಹೇಳಲು
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಮಿಂಚಿನ ಬಳ್ಳಿಯು ಒಡಲಲಿ ಓಡುತ ನಾಚಿ ನೋಡಿದಾಗ

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಮೇಲೆ ಸೂರ್ಯ ಜಾರಿ ಜಾರಿ ಬಿಸಿಲು ಕರಗಲು
ಸಂಜೆ ಬಂದು ರಂಗು ತಂದು ಮೇಲೆ ಎರಚಲು
ತಂಪು ಗಾಳಿ ಬೀಸಿ ಬಳ್ಳಿ ಬಳುಕಿ ಆಡಲು
ಹಾಗೇ ಹೀಗೆ ಆಡಿ ಹೂವು ಕಂಪು ಚೆಲ್ಲಲೂ
ದುಂಬಿ ನೋಡಿದಾಗ ಸಂಗೀತ ಹಾಡಿದಾಗ
ದುಂಬಿ ನೋಡಿದಾಗ ಸಂಗೀತ ಹಾಡಿದಾಗ
ಮನಸಿನ ಹಕ್ಕಿಯು ಕನಸನು ಕಾಣುತ ದೂರ ಹಾರಿದಾಗ

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು