Showing posts with label ಕಿಲಾಡಿ ಕಿಟ್ಟು. Show all posts
Showing posts with label ಕಿಲಾಡಿ ಕಿಟ್ಟು. Show all posts

Tuesday, October 26, 2010

ಹೂವಂತೆ ಹೆಣ್ಣು ನಗುತಿರಬೇಕು



ಚಿತ್ರ: ಕಿಲಾಡಿ ಕಿಟ್ಟು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಮೋಹನ್ ಕುಮಾರ್
ಗಾಯಕರು: ಕೆ. ಜೆ. ಯೇಸುದಾಸ್
ವರ್ಷ: ೧೯೭೬

ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು

ಬಂಗಾರವಲ್ಲ ಸಿಂಗಾರಕಲ್ಲ
ಕೊರಳಿನಲಿ ಮೆರೆದಿರಲು ಮಾಂಗಲ್ಯವಿಲ್ಲ
ಸುಮವ ಕೊಡುವ ಲತೆಗೆ ಹಸಿರೇ ಉಸಿರಾಗಿದೆ
ಗೃಹಿಣಿ ಇರುವ ಗುಡಿಗೆ ತಾಳಿ ಬೆಳಕಾಗಿದೆ
ಸಂತೋಷವೇನು ನೋವಾದರೇನು
ವಿರಸ ಮರೆತು ಸರಸದಿಂದ ಬಾಳಲು ಸೊಗಸು

ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು

ಆಕಾಶ ರವಿಯ ಈ ಭೂಮಿ ಗಿರಿಯ
ಮರೆಯುವುದೆ ತೊರೆಯುವುದೆ ಸಂಬಂಧ ನೂಕಿ
ಒಲಿದ ಹೃದಯ ಬೆರೆತ ಜೀವ
ಬಿಡದೆಂದಿಗೂ ಮದುವೆ ತಂದ ಬೆಸುಗೆ ಕೆಡದು ಎಂದೆಂದಿಗೂ
ಈ ರೋಷ ತಂದ ಆವೇಶದಿಂದ
ಸಹನೆ ಮರೆವೆ ಕಡೆಗೆ ಕೆಡುವೆ ಯಾತನೆ ಪಡುವೆ

ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು