Showing posts with label ಚಂದನದ ಗೊಂಬೆ. Show all posts
Showing posts with label ಚಂದನದ ಗೊಂಬೆ. Show all posts

Wednesday, February 16, 2011

ಕಂಗಳು ತುಂಬಿರಲು ಕಂಬನಿ ಧಾರೆಯಲಿ



ಚಿತ್ರ: ಚಂದನದ ಗೊಂಬೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ: ೧೯೭೯

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ..

ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೇ ಕಿವಿಗಳಲಿ
ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೇ ಕಿವಿಗಳಲಿ
ನಿಮ್ಮ ನೋಟ ಇನ್ನೂ ನನ್ನ ಹೃದಯವೀಣೆ ಮೀಟಿರಲು
ನಿಮ್ಮ ಸ್ನೇಹ ಮನಸಿನಲಿ ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂದಾ ನನ್ನಾ ಅಮ್ಮಾ ಎಂದು ಕೂಗಿರಲು
ನೊಂದ ನನ್ನ ಜೀವ ಇಂದು ಎನೋ ಸುಖಾ ಕಾಣುತಿದೆ

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ

ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ
ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ
ದೂರವಾಗಿ ಎಂದೆಂದಿಗೂ ಹೋಗಲಾರೆ ನಿಮ್ಮಾಣೆಗೂ
ನಿಮ್ಮ ಮನೆ ಬಾಗಿಲಿಗೆ ತೋರಣದ ಹಾಗಿರುವೆ
ನಿಮ್ಮ ಮನೆ ದೀಪವಾಗಿ ಬೆಳಗುವೆ ನನ್ನಾಣೆಗೂ
ನಿಮ್ಮ ನೆನಪಲ್ಲೇ ನನ್ನಾ ಬಾಳಾ ನಾನೂ ಸಾಗಿಸುವೆ

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ..

Wednesday, November 10, 2010

ಮನೆಯನು ಬೆಳಗಿದೆ ಇಂದು



ಚಿತ್ರ : ಚಂದನದ ಗೊಂಬೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ವರ್ಷ: ೧೯೭೯

ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ

ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು

ಬೇರೆ ಏನೂ ಬೇಡದ ಹಾಗೆ ಮೋಡಿಯ ನೀ ಮಾಡಿದೆ
ಈ ನಿನ್ನ ಚೆಲುವ ಈ ನನ್ನ ಒಲವ ಸವಿಯಲ್ಲಿ ಕರಗಿ ಹೋದೆ
ಬೇರೆ ಏನೂ ಕಾಣದ ಹಾಗೆ ಮಾಯವ ನೀ ಮಾಡಿದೆ
ಈ ನಿನ್ನ ರೂಪ ನನ್ನೆದೆಯ ದೀಪ ಆದಂದೆ ಸೋತು ಹೋದೆ
ನಾನಂದೇ ಸೋತು ಹೋದೆ

ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು

ನೂರು ಜನುಮ ಮಾಡಿದ ಪುಣ್ಯ ನಿನ್ನನು ನಾ ಹೊಂದಿದೆ
ನೀ ನೀಡಿ ಹರುಷ ನೂರಾರು ವರುಷ ಬದುಕುವ ಬಯಕೆ ತಂದೆ
ನೋಡಿ ನೋಡಿ ತಣಿಯದೇ ಮನವು ದಣಿಯದೇ ಹಾಡಿ ಕುಣಿದಿದೆ
ಬಾಳೆಲ್ಲ ಹೀಗೆ ಬಳಿಯಲ್ಲೆ ಇರುವ ಹೊನ್ನಾಸೆ ನೀನು ತಂದೆ
ನೀ ನನ್ನ ಜೀವವಾದೆ

ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು