Showing posts with label ಸೀತಾ. Show all posts
Showing posts with label ಸೀತಾ. Show all posts

Thursday, June 2, 2011

ಬರೆದೆ ನೀನು ನಿನ್ನ ಹೆಸರ

ಚಿತ್ರ: ಸೀತಾ
ಸಾಹಿತ್ಯ : ಅರ್. ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್
ಗಾಯಕರು : ಪಿ.ಬಿ. ಶ್ರೀನಿವಾಸ್
ವರ್ಷ: ೧೯೭೦

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದ ಹಾಡು ಮುಗಿವ ಮುನ್ನ ಎಲ್ಲಿ ಹೋದೆ ಮರೆಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಇಂದು ನನ್ನ ಮುಳುಗಿಸಿದೆ ಕಣ್ಣ ನೀರ ಹೊಳೆಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ