Showing posts with label ಸೊಸೆ ತಂದ ಸೌಭಾಗ್ಯ. Show all posts
Showing posts with label ಸೊಸೆ ತಂದ ಸೌಭಾಗ್ಯ. Show all posts

Wednesday, May 25, 2011

ರವಿವರ್ಮನ ಕುಂಚದ



ಚಿತ್ರ: ಸೊಸೆ ತಂದ ಸೌಭಾಗ್ಯ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಜಿ.ಕೆ.ವೆಂಕಟೇಶ್
ಗಾಯಕರು : ಪಿ.ಬಿ. ಶ್ರೀನಿವಾಸ್
ವರ್ಷ: ೧೯೭೭

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿಕಲ್ಪನೆ ಕಾಣುವಾ ಚೆಲುವಿನಾ ಜಾಲವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ

ಉಯ್ಯಾಲೆಯಾ ಆಡಿ ನಲಿವಾ ರೂಪಸೀ
ಉಯ್ಯಾಲೆಯಾ ಆಡಿ ನಲಿವಾ ರೂಪಸೀ
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶೀ
ನನ್ನೊಲವಿನ ಪ್ರೇಯಸಿ

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ

ಹೂರಾಶಿಯ ನಡುವೆ ನಗುವ ಕೋಮಲೇ
ಹೂರಾಶಿಯ ನಡುವೆ ನಗುವ ಕೋಮಲೇ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೇ..
ಚಿರಯೌವ್ವನ ನಿನ್ನಲೇ

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿಕಲ್ಪನೆ ಕಾಣುವಾ ಚೆಲುವಿನಾ ಜಾಲವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ