Tuesday, December 21, 2010

ಒಲುಮೆ ಸಿರಿಯ ಕಂಡು



ಚಿತ್ರ: ಬಂಗಾರದ ಜಿಂಕೆ
ಸಾಹಿತ್ಯ : ದೊಡ್ಡರಂಗೇಗೌಡ
ಸಂಗೀತ : ವಿಜಯಭಾಸ್ಕರ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦

ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ..
ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ..

ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಮಾತಾಡದೆ..ಬಳಿಬಾರದೆ..
ಮಾತಾಡದೆ..ಬಳಿಬಾರದೆ..ನನ್ನಿಂದ ನೀ ದೂರ ಹೋದೆ

ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ

ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೆ
ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗದೆ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೆ
ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗದೆ
ಬೇರಾಗದೆ ದೂರಾಗದೆ
ಬೇರಾಗದೆ ದೂರಾಗದೆ...ನನ್ನನ್ನು ನೀ ಸೇರು ಇಂದೆ

ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ

1 comment:

KANNADA BARAHAGALA COLLECTIONS said...

ಸೊಂಪಾದ ತಾಣವು ಪದ
ಆಗಬೇಕು