Monday, November 8, 2010

ಉಷೆ ಮೂಡಿದಾಗ



ಚಿತ್ರ: ಪ್ರೀತಿವಾತ್ಸಲ್ಯ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೪

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ

ಹೂವರಳಿ ನಿಂತ ವೇಳೆ ಕಣ್ಮುಂದೆ ಬಂದಿತಲ್ಲೇ
ಪ್ರಿಯೆ ನಿನ್ನ ಕಾಡಿಗೆ ಕಣ್ಣ ಆ ನೋಟದಂದವೇ
ಕರೆ ನೀಡಿ ನೋಟದಲ್ಲಿ ನೀ ನಿಂತೆ ದೂರದಲ್ಲಿ
ಬಳಿ ಬಂದೆ ಬಯಸಿ ನಿನ್ನ ನೀ ಹೋದೆ ಕಾಣದೆ
ಆ ನೆನಪು ಕಾಡಿದೆ ನನ್ನ ಈ ಬೇಗೆ ತಾಳೆನು ಚಿನ್ನ

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ

ಕಾವೇರಿ ನೀರಿನಲ್ಲೂ ಕನ್ನಡದ ಕಾವ್ಯದಲ್ಲೂ
ಬೇಲೂರ ಬಾಲೆಯಲ್ಲೂ ನಾ ಕಂಡೆ ನಿನ್ನನು
ಒಂದೊಂದು ಭಂಗಿಯಲ್ಲೂ ಒಂದೊಂದು ಭಾವದಲ್ಲೂ
ಒಂದೊಂದು ಮಾತಿನಲ್ಲೂ ನೀ ಸೆಳೆದೆ ನನ್ನನು
ನೀ ನಿಂತೆ ಕಣ ಕಣದಲ್ಲೂ ನನ್ನೆದೆಯ ಉಸಿರುಸಿರಲ್ಲೂ

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ

No comments: